ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 16ರಂದು ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯ ಗೆಲುವು ಮತ್ತು ಬಾಂಗ್ಲಾದೇಶದ ವಿಮೋಚನೆಯನ್ನು ವಿಜಯ ದಿವಸ್….
1971 ಯುದ್ಧದಲ್ಲಿ ನಡೆದ ಘಟನೆಗಳಿಂದಾಗಿ ಭಾರತ ತನ್ನ ಸೇನಾ ಪಡೆಗಳನ್ನು ತೊಡಗಿಸಬೇಕಾಯಿತು. ಹದಿಮೂರು ದಿನಗಳ ಕಾಲ ನಂತರ ಮುಗಿದ ಈ ಭಯಾನಕ ಯುದ್ಧ, ಹೊಸ ದೇಶದ ಸೃಷ್ಟಿಗೆ ಕಾರಣವಾಯಿತು.
ಡಿಸೆಂಬರ್ 16ರಂದು ಆಚರಿಸಲಾಗುವ ವಿಜಯ ದಿವಸ್‌ದಂದು 1971ರಲ್ಲಿ ನಡೆದ ಬಾಂಗ್ಲಾದೇಶ್ ಸ್ವಾತಂತ್ರ್ಯ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯ ಸಾಧಿಸಿದ್ದು ಸದಾ ಕಾಲ ಜನ ಮನದಲ್ಲಿ ಸ್ಮರಿಸುತ್ತಾರೆ.
ಭಾರತೀಯ ಸೇನಾಪಡೆಗಳ ಶೌರ್ಯ ಸಾಹಸಗಳ ಪರಿಣಾಮವಾಗಿ ಅಂದಾಜು 93,000 ಪಾಕಿಸ್ತಾನಿ ಸೈನಿಕರು ಶರಣಾಗತಿ ಹೊಂದಿದರೆ, ಬಹುತೇಕ 3,000 ಭಾರತೀಯ ಸೈನಿಕರು ಪ್ರಾಣ ತ್ಯಾಗ ಮಾಡಿದರು.
ಡಿಸೆಂಬರ್ 16, 1971ರಲ್ಲಿ ಡಾಕದಲ್ಲಿ ಸೋಲಿನ ನಂತರ, ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲ ಖಾನ್ ನಿಯಾಜಿ ಜೊತೆ 93 ಸಾವಿರ ಸೇನಾ ಪಡೆಗಳು ಸೇರಿ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ನೇತೃತ್ವದ ಮಿತ್ರ ಪಡೆಗಳ ಮುಂದೆ ಬೇಷರತ್ತಾಗಿ ಶರಣಾದರು.
ಒಟ್ಟಾರೆ ಈ ಯುದ್ಧವು ಬಾಂಗ್ಲಾದೇಶದ ಸ್ವಾತಂತ್ರಕ್ಕೆ ಕಾರಣವಾಗಿ ಭಾರತವು ಕೂಡ ಜಯಶಾಲಿಯಾಯಿತು. ಇತಿಹಾಸದಲ್ಲಿ ದಾಖಲೆ ಮಾಡಿದ ಈ ದಿನ ದೇಶಕ್ಕಾಗಿ ರಕ್ತ ಕೊಟ್ಟ, ಹೊಡೆದಾಡಿದ ಪ್ರತಿಯೊಂದು ಹುತಾತ್ಮ ಯೋಧನನ್ನು ನೆನಪಿಸಿಕೊಳ್ಳಬೇಕಾಗಿದೆ. ವಿಜಯ ದಿವಸ್ ಎಂದು ಆಚರಿಸಲಾಗುವ ಈ ದಿನ ಪಾಕಿಸ್ತಾನ ವಿರುದ್ಧ ಜಯ ಸಾಧಿಸದ ಭಾರತ ಸೇನಾ ಪಡೆಯ ಶಕ್ತಿ ,ಯುಕ್ತಿ, ಸಾಹಸ ಹಾಗೂ ಅವರ ಹುಮ್ಮಸ್ಸನ್ನು ನೆನೆಯಲಾಗುತ್ತದೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಜೊತೆಗೆ ಈ ವಿಶೇಷ ದಿನದ ಅಸ್ತಿತ್ವ.