ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದ ಬೆನ್ನಲ್ಲೇ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದಿನಕರ್ ತೂಗುದೀಪ್ ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು. ಇದೀಗ ಪೂಜೆಯ ಪ್ರಸಾದ ಸಮೇತ ದರ್ಶನ್‌ಗೆ ನೀಡಲು ವಿಜಯಲಕ್ಷ್ಮಿ ಕುಟುಂಬ ಜೈಲಿಗೆ ಆಗಮಿಸಿದ್ದಾರೆ.