ಪತಿ ಪರ ವಿಜಯಲಕ್ಷ್ಮೀ ಬ್ಯಾಟಿಂಗ್‌, ರಮ್ಯಾ ವಿರುದ್ಧ ದೂರು ಕೊಡೋಕೆ ಸಜ್ಜಾದ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ತನಿಖೆ ನಡೆಯುತ್ತಿರುವ ನಡುವೆಯೇ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ತಮ್ಮ ಮೇಲೆ ಅಶ್ಲೀಲ, ನಿಂದನೀಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿದ ರಮ್ಯಾ, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಮಧ್ಯೆ, ಈ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರಕರಣದಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಕಂಡು ಬಂದಿವೆ. ನಟಿ ರಮ್ಯಾ ಮಾಡಿರುವ ಪೋಸ್ಟ್‌ಗಳು ನ್ಯಾಯಾಲಯದಲ್ಲಿರುವ ವಿಚಾರಣೆಗೆ ಬಾಹ್ಯ ಒತ್ತಡ ಉಂಟುಮಾಡುತ್ತಿವೆ ಎಂದು ಆರೋಪಿಸಿ, ವಿಜಯಲಕ್ಷ್ಮೀ ಅವರು ರಮ್ಯಾ ವಿರುದ್ಧ ಸೈಬರ್ ದೂರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ವಿಜಯಲಕ್ಷ್ಮೀ ಅವರು ಮೊದಲು ಈ ಪ್ರಕರಣದ ಕುರಿತು ಮೌನವಾಗಿದ್ದರು ಇದೀಗ ಪರೋಕ್ಷವಾಗಿ ದರ್ಶನ್ ಪರವಾಗಿರುವ ಸಾಮಾಜಿಕ ಜಾಲತಾಣದ ಮೂಲಕ ಪ್ರಕರಣದ ಧೋರಣೆಯನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂಬ ಊಹಾಪೋಹಗಳು ನಡೆಯುತ್ತಿವೆ.

ಇತ್ತ, ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ವಿರುದ್ಧ ಟ್ರೋಲ್‌ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನಟಿ, “ಡಿಭಾಸ್ ಅಭಿಮಾನಿಗಳು ನನಗೆ ಕಳಿಸುತ್ತಿರುವ ಮೆಸೇಜ್‌ಗಳು ಮತ್ತು ರೇಣುಕಾಸ್ವಾಮಿ ಅವರಿಗೆ ಕಳಿಸಲಾದ ಮೆಸೇಜ್‌ಗಳಲ್ಲಿ ಏನು ವ್ಯತ್ಯಾಸ?” ಎಂದು ತೀವ್ರ ಪ್ರಶ್ನೆ ಎಬ್ಬಿಸಿದ್ದಾರೆ.

“ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಆದರೂ ಅವರು ಮಾತಾಡದಿದ್ದರೆ, ಅದು ಅವಲೋಕನಕ್ಕೆ ಮತ್ತು ಪ್ರೋತ್ಸಾಹಕ್ಕೆ ಸಮಾನ” ಎಂದು ರಮ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಹೆಣ್ಣುಮಕ್ಕಳ ಭದ್ರತೆ ಈ ನಡುವೆ ಯಾವ ಮಟ್ಟಿಗೆ ಖಚಿತ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಮ್ಯಾ, “ನಾನೇ ಈ ಮಟ್ಟಿಗೆ ಟ್ರೋಲ್‌ಗೆ ಗುರಿಯಾಗುತ್ತಿದ್ದೇನೆ, ಹಾಗಾದರೆ ಸಾಮಾನ್ಯ ಮಹಿಳೆಯ ಸ್ಥಿತಿ ಏನು?” ಎಂದು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಎಬ್ಬಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ವಿಜಯಲಕ್ಷ್ಮೀ ಎಂಟ್ರಿ ಪ್ರಕರಣಕ್ಕೆ ಹೊಸ ಮಾರ್ಗಸೂಚಿಯನ್ನು ಕೊಡುವ ಸಾಧ್ಯತೆ ಹೆಚ್ಚಾಗಿದ್ದು, ನಟಿ ರಮ್ಯಾ ವಿರುದ್ಧದ ಕಾನೂನು ಕ್ರಮಗಳು ಮುಂದಿನ ಹಂತದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ದಾರಿ ಮಾಡಿಕೊಡುವ ಸಂಭವವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!