ಹೊಸದಿಗಂತ ವಿಜಯಪುರ:
ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತಪಟ್ಟವನನ್ನು ಗ್ರಾಮದ ಶರಣಗೌಡ ಚನಗೊಂಡಪ್ಪ ಪಾಟೀಲ (25) ಎಂದು ಗುರುತಿಸಲಾಗಿದೆ.
ಶರಣಗೌಡ ಪಾಟೀಲನನ್ನು ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಮಾಡಿ, ಬಾವಿಗೆ ಎಸೆಯಲಾಗಿದೆ ಎಂದು ಶಂಕಿಸಲಾಗಿದ್ದು, ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.