ಹೊಸದಿಗಂತ ಡಿಜಿಟಲ್ ಡೆಸ್ಕ್:
17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ವಿಜಯಯಾತ್ರೆ ಶುರುವಾಗಿದೆ. ಮುಂಬೈ ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಅದ್ಧೂರಿ ಯಾತ್ರೆ ಆರಂಭವಾಗಿದೆ. ಇಲ್ಲಿಂದ ಸುಮಾರು 2 ಕಿಮೀ ವಿಜಯೋತ್ಸವ ಯಾತ್ರೆ ನಡೆಯಲಿದ್ದು, ನಂತರ ವಾಂಖೆಡೆ ಮೈದಾನ ತಲುಪಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿದಂತೆ ವಿಶ್ವಕಪ್ ವಿಜೇತ ತಂಡ ತೆರೆದ ಬಸ್‌ನಲ್ಲಿ ಹೊರಟಿದೆ. ಪಕ್ಕದಲ್ಲೇ ಇದ್ದ ಸಮುದ್ರವನ್ನೂ ನಾಚಿಸುವಂತೆ ನೆರೆದಿದ್ದ ಅಭಿಮಾನಿಗಳ ಸಾಗರ ಕಂಡು ಆಟಗಾರರು ಹರ್ಷಗೊಂಡಿದ್ದಾರೆ. ಮೈಮೇಲೆ ರಾಷ್ಟ್ರಧ್ವಜ ಹೊದ್ದು, ಕೈಯಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಾ ಕೈಬೀಸಿ ಮುಂದೆ ಸಾಗುತ್ತಿದ್ದಾರೆ.
ವಿಜಯಯಾತ್ರೆಯಲ್ಲಿ ʻರೋಹಿತ್ ಭಾಯ್, ಕೊಹ್ಲಿ ಭಾಯ್ʼ ಘೋಷಣೆಗಳು ಮೊಳಗಿವೆ. ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳು ಮಳೆಯಲ್ಲೂ ಉತ್ಸಾಹ ಕಳೆದಕೊಳ್ಳದೇ ವಿಶ್ವವೀರರನ್ನ ಸ್ವಾಗತಿಸಿದ್ದಾರೆ.