ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಯಾನ್ ವಿಕ್ರಮ್ ನಟನೆಯ ಕೋಬ್ರಾ ಮತ್ತು ಪೊನ್ನಿಯಿನ್ ಸೆಲ್ವನ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ವಿಭಿನ್ನ ಚಿತ್ರಕಥೆಯೊಂದಿಗೆ ವಿಭಿನ್ನ ಗೆಟಪ್‌ಗಳಲ್ಲಿ ವಿಕ್ರಮ್ ಈ ಸಿನಿಮಾದಲ್ಲಿ ಜನರಿಗೆ ಮನರಂಜನೆ ನೀಡಿದ್ದಾರೆ. ಪಾ ರಂಜಿತ್ ನಿರ್ದೇಶನದಲ್ಲಿ ವಿಕ್ರಮ್ ಅವರ 61 ನೇ ಚಿತ್ರ ಅನೌನ್ಸ್ ಆಗಿದೆ.
ದೀಪಾವಳಿಯಂದು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದು, ಈ ಚಿತ್ರದ ಶೀರ್ಷಿಕೆಯನ್ನು ಘೋಷಿಸುವ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವಿಕ್ರಮ್ ಪಕ್ಕಾ ಹಳ್ಳಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಉದ್ದದ ಗಡ್ಡ, ಮೈಮೇಲೆ ಒಂದು ಗೋಚಿ ಮಾತ್ರ ಹಾಕಿಕೊಂಡು ಕಾಣಿಸಿದ್ದಾರೆ. ಈ ಚಿತ್ರದ ಹೆಸರು ‘ತಂಗಳನ್’ ಎಂದು ಘೋಷಿಸಿದ್ದು, ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ. ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದ ನಿಯತಕಾಲಿಕ ಹಿನ್ನೆಲೆಯನ್ನು ಆಧರಿಸಿದೆ. ಮಾಳವಿಕಾ ಮೋಹನನ್ ಇದರಲ್ಲಿ ನಾಯಕಿಯಾಗಿ ನಟಿಸಲಿದ್ದು, ಇದರಲ್ಲಿ ವಿಕ್ರಮ್ ಲುಕ್ ತುಂಬಾ ವಿಭಿನ್ನವಾಗಿದೆ.