ನಾಳೆ ಸಂಜೆ ವಿಕ್ರಮ ಕಾಫಿಟೇಬಲ್‌ ಪುಸ್ತಕ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜ್ಞಾನ ಭಾರತಿ ಪ್ರಕಾಶನದ ಉಜ್ವಲ ರಾಷ್ಟ್ರೀಯ ವಾರಪತ್ರಿಕೆಯಾದ ‘ವಿಕ್ರಮ’ವು ಹೊರತರುತ್ತಿರುವ ಕಲ್ಯಾಣ ಕರ್ನಾಟಕದ ಸರ್ವತೋಮುಖ ಸಾಧನೆಗಳ ಪಕ್ಷಿನೋಟ ಬೀರುವ ʼಕರುನಾಡ ಶಿಖರ ಕಲ್ಯಾಣ ಕರ್ನಾಟಕʼ ಕಾಫಿಟೇಬಲ್‌ ಹೊತ್ತಗೆ ನಾಳೆ ಕಲಬುರಗಿಯ ಕಮಿತ್ಕರ್‌ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷದ್‌ ನ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲ್‌ ನಾಗರಕಟ್ಟೆ, ಈ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಚಾಲಕ್ ಜಗೇಶನ್‌ ಪಟ್ಟಣಶೆಟ್ಟಿ ವಹಿಸಲಿದ್ದು, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್.ಅಪ್ಪ ಮುಖ್ಯ ಅತಿಥಿಗಳಾಗಿ ಸಾನ್ನಿಧ್ಯ ವಹಿಸಲಿದ್ದಾರೆ.

ಈ ಸಮಾರಂಭಕ್ಕೆ ವಿಕ್ರಮ ಬಳಗ ಸರ್ವರಿಗೂ ಆದರದ ಸ್ವಾಗತ ಕೋರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!