ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀಪ್ ಅಭಿನಯದ ವಿಕ್ರಾಂತ್ ರೋಣ (Vikranth Rona) ಚಿತ್ರದ ನಟಿ ಪನ್ನಾ ಅಲಿಯಾಸ್ ನೀತಾ ಅಶೋಕ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ಸತೀಶ್ ಮೆಸ್ತಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನೀತಾ ವಿಕ್ರಾಂತ್ ರೋಣ ಚಿತ್ರದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನಟಿಸಿದ್ದರು.
ನೀತಾ ಅವರು ಉಡುಪಿಯ ಕೋಟ ಮೂಲದವರಾಗಿದ್ದು, ಅವರ ಪತಿ ಸತೀಶ್ ಮೇಸ್ತಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದಾರೆ. ವಿಕ್ರಾಂತ್ ರೋಣದಲ್ಲಿ ನಟಿಸುವ ಮುನ್ನ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಶೋದಾ’ ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ನೀತಾ ಅಶೋಕ್ (Neeta Ashok) ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರಷ್ಟೇ ಆಗಮಿಸಿದ್ದು, ಈ ಮದುವೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಲಗ್ನ ಪತ್ರಿಕೆ ವೈರಲ್ ಆಗಿದೆ. ಅದರ ಪ್ರಕಾರ ಇಂದು ಮಧ್ಯಾಹ್ನ 12.25ಕ್ಕೆ ಮದುವೆಯಾಗಿದೆ.