ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ಮತ್ತೊಂದು ಎಕ್ಸೈಟಿಂಗ್ ಅಪ್‌ಡೇಟ್ ನೀಡಿದೆ.
ಬರೋಬ್ಬರಿ ಒಂಬತ್ತು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಹಾಲಿವುಡ್‌ನಲ್ಲಿ ಸಿನಿಮಾ ಮಿಂಚಲಿದೆ. ಇಂಗ್ಲಿಷ್‌ನಲ್ಲಿ ಬೇರೆ ಯಾರೋ ಡಬ್ಬಿಂಗ್ ಮಾಡದೇ ಕಿಚ್ಚ ಸುದೀಪ್ ತಮ್ಮ ಧ್ವನಿ ನೀಡಿದ್ದಾರೆ.
ಈಗಷ್ಟೇ ಇಂಗ್ಲಿಷ್‌ನಲ್ಲಿ ಡಬ್ಬಿಂಗ್ ಮುಗಿದಿದ್ದು, ಅಭಿಮಾನಿಗಳು ಸುದೀಪ್ ಸಿನಿಮಾವನ್ನು ಇಂಗ್ಲಿಷ್‌ನಲ್ಲಿ ನೋಡೋಕೆ ಉತ್ಸುಕರಾಗಿದ್ದಾರೆ.
ಸಾವಿರಾರು ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ತೆರೆಕಾಣಲಿದ್ದು, ಅನುಪ್ ಬಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದೆ.