ಹೊಸದಿಗಂತ ವರದಿ, ಶಿವಮೊಗ್ಗ :
ತಾಲೂಕಿನ ಕಸಬಾ -1 ಹೋಬಳಿ, ಗಾಡಿಕೊಪ್ಪ ವೃತ್ತ, ಗ್ರಾಮ ಅಡಳಿತ ಅಧಿಕಾರಿ ಸುರೇಶ್ ಜಿ. ಜಮೀನು ಖಾತೆ ಮಾಡಿಕೊಡಲು 06 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಕಾರಿಗಳು ಬಂಧಿಸಿದ್ದಾರೆ.
ಕೃಷಿನಗರ ನಿವಾಸಿ ಸಂಕೇತ್ ಎಂಬುವವರು ಖರೀದಿಸಿದ ಜಮೀನನ್ನು ತನ್ನ ತಾಯಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಫ್ರೀಡಂ ಪಾರ್ಕ್ನಲ್ಲಿರುವ ಗ್ರಾಮ ಆಡಳಿತ ಅಕಾರಿಗಳ ಕಚೇರಿಗೆ ಹೋಗಿ ಸುರೇಶ್ ಜಿ. ಬಳಿ ತಾವು ಖರೀದಿಸಿದ ಜಮೀನನ್ನು ಖಾತೆ ಮಾಡಿಕೊಡುವಂತೆ ಕೇಳಿದ್ದ.ರು. ಆಗ 6000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕ.ಲೋ.ಪೋಲೀಸ್ ಅಧೀಕ್ಷಕ ಮಂಜುನಾಥ್ ಚೌ‘ರಿ ಎಂ.ಹೆಚ್ ಮತ್ತು ಪೊಲೀಸ್ ಉಪಾೀಕ್ಷಕ ಉಮೇಶ ಈಶ್ವರ ನಾಯ್ಕ ಇವರುಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ಎ.ಮಹಂತೇಶ, ಯೋಗೇಶ್, ಸುರೇಂದ್ರ ಹೆಚ್.ಜಿ, ಬಿ.ಟಿ ಚನ್ನೇಶವ. ಪ್ರಶಾಂತ್ಕುಮಾರ, ರಘುನಾಯ್ಕ, ದೇವರಾಜ್, ಗಂಗಾ‘ರ, ಪ್ರದೀಪ್, ಗೋಪಿ ಹಾಗೂ ಜಯಂತ್ ಕಾರ್ಯಾಚರಣೆ ನಡೆಸಿದರು.