ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ಗಳು ಕ್ಯಾಪ್ಟನ್ಸಿಗಾಗಿ ನಡೆದಿವೆ. ಇದೀಗ ಕ್ಯಾಪ್ಟನ್ಸಿ ಓಟದಿಂದ ವಿನಯ್ ಬೆಸ್ಟ್ಫ್ರೆಂಡ್ ನಮ್ರತಾ ವಿನಯ್ ಅವರನ್ನು ಹೊರಗಿಟ್ಟಿದ್ದಾರೆ.
ಇದರಿಂದ ವಿನಯ್ಗೆ ಶಾಕ್ ಆಗಿದೆ. ಮೊದಲನೆ ದಿನದಿಂದ ಒಟ್ಟಿಗೇ ಇದ್ದ ವಿನಯ್ ನಮ್ರತಾ ಮಧ್ಯೆ ಈ ರೀತಿ ಆಗಿದ್ದಿ ಇದೇ ಮೊದಲು. ಮುಜುಗರದಿಂದಲೇ ನಮ್ರತಾ ವಿನಯ್ಗೆ ಕೋಪ ಜಾಸ್ತಿ, ಕೋಪದಲ್ಲಿ ಏನೇನೋ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.
ವಿನಯ್ ನಮ್ರತಾ ಮಾತಿನಿಂದ ನೋವು ಅನುಭವಿಸಿದ್ದು, ಈ ಜರ್ನಿಯಲ್ಲಿ ಯಾರಿಗೆ ಯಾರೂ ಇಲ್ಲ, ನಾವು ಒಬ್ಬರೇ ಎಂದು ಹೇಳಿದ್ದಾರೆ.
ಈ ವಾರ ಕ್ಯಾಪ್ಟನ್ ಆದವರಿಗೆ ಡಬಲ್ ಅಧಿಕಾರ ಎಂದು ಬಿಗ್ಬಾಸ್ ಮುಂಚೆಯೇ ಹೇಳಿದ್ದರು. ಈ ಕಾರಣದಿಂದ ಎಲ್ಲರೂ ಜಾಸ್ತಿಯೇ ಎಫರ್ಟ್ ಹಾಕಿ ಟಾಸ್ಕ್ ಮಾಡಿದ್ದರು.
ನಮ್ರತಾ ನಿರ್ಧಾರಕ್ಕೆ ತಿರುಗಿಬಿದ್ರಾ ವಿನಯ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Sw1xc3NJCn
— Colors Kannada (@ColorsKannada) November 30, 2023