ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ-ರಜತ್ ಕಿಶನ್ ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಇಬ್ಬರ ಸ್ನೇಹದ ಬಿರುಕಿನ ಬಗ್ಗೆ ವಿನಯ್ ಗೌಡ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಬ್ರೇಕ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಬ್ರೇಕ್ ಮಾಡಿಕೊಳ್ಳುವವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಇರುಸು-ಮುರುಸು ಇರುತ್ತದೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ, ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ. ನನ್ನ ರಜತ್ ಫ್ರೆಂಡ್ ಶಿಪ್ ಕಟ್ ಆಗಿಲ್ಲ. 18 ಸೆಕೆಂಡ್ ರೀಲ್ಸ್ ಗೋಸ್ಕರ 18 ವರ್ಷದ್ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳಲ್ಲ ಎಂದು ವಿನಯ್ ಗೌಡ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.