ಹೊಸದಿಗಂತ ಹಾವೇರಿ:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಣೇಬೆನ್ನೂರಿನ ಎಂ.ಜಿ ರಸ್ತೆಯಲ್ಲಿ ಸುರೇಶಕುಮಾರ್ ದೇಸಾಯಿ ಇವರಿಗೆ ಸೇರಿದ ಅನಧಿಕೃತ ಗೋದಾಮಿನ ಮೇಲೆ ಶಿವಕುಮಾರ್ ನೇತೃತ್ವದ ವಾಣಿಜ್ಯ ತೆರಿಗೆ ಇಲಾಖೆಯ ತಂಡ ಹಾಗೂ ಎಂ.ಜಿ ನಾಯಕ್ ನೇತೃತ್ವದ ಸಂಚಾರ ಕಣ್ಗಾಗವಲು ತಂಡ ದಾಳಿ ನಡೆಸಿದೆ.
ದಾಳಿ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂದಾಜು 5.5 ಲಕ್ಷ ಮೌಲ್ಯದ 528 ಕುಕ್ಕರ್ ಗಳು, 316 ಫ್ಯಾನ್ ಗಳು,126 ಮಿಕ್ಸಿ ಹಾಗೂ 8 ಗ್ಯಾಸ್ ಸ್ಟವ್ ಗಳನ್ನು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ.