ವಾಸ್ತವ್ಯ ನಿಯಮ ಉಲ್ಲಂಘನೆ: ಸೌದಿ ಅರೇಬಿಯಾದಲ್ಲಿ 12,129 ವಲಸಿಗರ ಬಂಧನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ವಾಸ್ತವ್ಯ ನಿಯಮ ಉಲ್ಲಂಘನೆಗಾಗಿ ಸೌದಿ ಅರೇಬಿಯಾ ಆಂತರಿಕ ಮಂತ್ರಾಲಯವು 12,129 ವಲಸಿಗರನ್ನು ಒಂದು ವಾರದೊಳಗೆ ಬಂಧಿಸಿದೆ. 7,127 ಜನರನ್ನು, ಅನಧಿಕೃತವಾಗಿ ಗಡಿ ದಾಟಲು ಪ್ರಯತ್ನಿಸಿದ್ದಕ್ಕಾಗಿ 3,441 ಜನರನ್ನು ಮತ್ತು ಉದ್ಯೋಗ ನಿಯಮ ಉಲ್ಲಂಘನೆಗಾಗಿ 1,561 ಜನರನ್ನು ಬಂಧಿಸಲಾಗಿದೆ.

ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಲು ಯತ್ನಿಸಿದ್ದಕ್ಕಾಗಿ ಬಂಧಿತರಾದ 1,197 ಜನರಲ್ಲಿ ಶೇ.63ರಷ್ಟು ಇಥಿಯೋಪಿಯನ್ನರು, ಶೇ.34ರಷ್ಟು ಯೆಮೆನ್ನರು ಮತ್ತು ಶೇ.3ರಷ್ಟು ಇತರ ದೇಶಗಳವರು. ಇದರೊಂದಿಗೆ 90 ಇಥಿಯೋಪಿಯನ್ನರನ್ನು ಬಂಧಿಸಲಾಗಿದೆ. ಕಾನೂನು ಉಲ್ಲಂಘಿಸುವವರನ್ನು ಸಾಗಿಸುವುದರಲ್ಲಿ ಮತ್ತು ವಸತಿ ಕಲ್ಪಿಸುವುದರಲ್ಲಿ ಭಾಗಿಯಾಗಿದ್ದಕ್ಕಾಗಿ 18 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಅಕ್ರಮವಾಗಿ ಪ್ರವೇಶಿಸಲು ಸಹಾಯ ಮಾಡುವವರಿಗೆ, ಸಾರಿಗೆ ಮತ್ತು ವಸತಿ ಸೌಲಭ್ಯ ಒದಗಿಸುವವರಿಗೆ ಗರಿಷ್ಠ 15 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರಿಯಾಲ್ ದಂಡ ವಿಧಿಸಲಾಗುತ್ತದೆ. ವಾಹನಗಳು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಮಂತ್ರಾಲಯ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!