ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಹೆಚ್ಚಾಗಿದ್ದು, ಸಂಜೆ ವೇಳೆಗೆ ವ್ಯಕ್ತಿಯೊಬ್ಬರ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ.
ಬಲಿಯಾದವರನ್ನು ಸೋಬಾಮ್ ಶರತ್‌ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಶರತ್‌ಕುಮಾರ್ಲೀ ಶಾಬಿಥೋಲ್‌ನಲ್ಲಿರುವ ತಮ್ಮ ಮಗನ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಶರತ್‌ಕುಮಾರ್ ಮನೆಗೆ ಹೋಗುತ್ತಿದ್ದಾಗ ಖಾಸಿಯಾ ಪುಂಜಿ ಬಳಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಕಟ್ಟಿಹಾಕಿದ್ದಾರೆ. ಅವರ ಕುಟುಂಬ ಸದಸ್ಯರು ಜಿರಿಬಾಮ್ ಜಿಲ್ಲಾ ಪೊಲೀಸರಿಗೆ ತಕ್ಷಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ, ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು.
ಜಿರಿಬಾಮ್ ಪೊಲೀಸ್ ಠಾಣೆಯಿಂದ ಉತ್ತರಕ್ಕೆ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಮುಲರ್ಗೋನ್ ಬಳಿ ಶರತ್‌ಕುಮಾರ್ ದೇಹವು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಸಾಕಷ್ಟು ಮನೆಗಳಿಗೆ ಏಕಾಏಕಿ ಬೆಂಕಿ ಹಾಕಲಾಗಿದೆ.