ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ನಗರದ ಗೋಪಾಲ್‌ಗಂಜ್‌ನಲ್ಲಿ ಅವಾಮಿ ಲೀಗ್ ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ನಾಲ್ವರು ಸಾವನ್ನಪ್ಪಿದ್ದಾರೆ.
ಗೋಪಾಲ್‌ಗಂಜ್‌ನಲ್ಲಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿದ್ಯಾರ್ಥಿ ಪಕ್ಷವಾದ ಎನ್‌ಸಿಪಿಯ ಚಳುವಳಿಗೂ ಮೊದಲು ಈ ಹಿಂಸಾಚಾರ ಸಂಭವಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಗೋಪಾಲ್‌ಗಂಜ್ ರಣರಂಗವಾಗಿ ಮಾರ್ಪಟ್ಟಿದ್ದು ದಿನವಿಡೀ ಇಲ್ಲಿ ಬೆಂಕಿ ಹಚ್ಚುವಿಕೆ, ಹಿಂಸಾಚಾರ ಮತ್ತು ಗುಂಡಿನ ದಾಳಿ ಮುಂದುವರೆಯಿತು.
ಗುಂಡೇಟಿನಿಂದ ಗಾಯಗೊಂಡ ಇನ್ನೂ ಒಂಬತ್ತು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಪಾಲ್‌ಗಂಜ್‌ನಲ್ಲಿ ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶದ (ಬಿಜಿಬಿ) ನಾಲ್ಕು ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿದೆ. ಟ್ಯಾಂಕರ್ಗಳು ಬೀದಿಗಳಲ್ಲಿ ಗಸ್ತು ತಿರುಗುತ್ತಿವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಗೋಪಾಲ್‌ಗಂಜ್‌ನಲ್ಲಿ 22 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಎನ್‌ಸಿಪಿ ಮೇಲಿನ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.