ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಕೋತಿಗಳನ್ನು ನೋಡಿದಾಗ ಕ್ಯೂಟ್ ಎಂಬ ಭಾವನೆ ಮೂಡುತ್ತದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ವಿಡಿಯೋ ಈ ಅಭಿಪ್ರಾಯವನ್ನೇ ಬದಲಾಯಿಸಿದೆ. ವಿವಿಧ ಬಣ್ಣಗಳಲ್ಲಿ ಅಸಾಧಾರಣವಾಗಿ ಕಾಣುವ ಕೋತಿಯ ಫೋಟೋ ಇಂಟರ್ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕೋತಿ ವಿಶ್ವದಲ್ಲೇ ಅಪರೂಪವೆಂದು ಪರಿಗಣಿಸಲ್ಪಡುವ ಡೌಕ್ ಲಂಗೂರ್ ಎಂಬ ಜಾತಿಗೆ ಸೇರಿದೆ.
ವರ್ಣರಂಜಿತ ಚರ್ಮ, ಸುಂದರವಾಗಿ ಹೊಂದಿಕೊಂಡ ಬಣ್ಣಗಳ ದೇಹ ಮತ್ತು ಮುದ್ದಾದ ಮುಖ ಈ ಎಲ್ಲ ಕಾರಣಗಳಿಂದ ಡೌಕ್ ಲಂಗೂರ್ ನಿಜಕ್ಕೂ ಚಿತ್ರಕಲೆಯಂತೆ ಕಾಣುತ್ತದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, “ಇದು ನಿಜವಾದ ಪ್ರಾಣಿ ಅಲ್ಲ, ಅನಿಮೇಷನ್ ಆಗಿರಬೇಕು” ಎಂಬ ಅನುಮಾನವೂ ಹಲವರಲ್ಲಿ ಮೂಡಿದೆ. ಆದರೂ, ಇದು ನೈಜವಾಗಿರುವ ಅಪರೂಪದ ಜೀವಿ ಎಂಬುದು ತಿಳಿದ ಬಳಿಕ ನೆಟ್ಟಿಗರು ಅದರ ಸೌಂದರ್ಯಕ್ಕೆ ಮರುಳಾಗಿದ್ದಾರೆ.
ಈ ವೀಡಿಯೊವನ್ನು ‘hangrybynature’ ಎಂಬ ಇನ್‌ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದ್ದು, ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಪೋಸ್ಟ್ ಪ್ರಕಾರ, ಈ ಕೋತಿಯನ್ನು ವಿಯೆಟ್ನಾಂನ ಡಾನಾಂಗ್ ಅರಣ್ಯಗಳಲ್ಲಿ ಅಥವಾ ಸಿಂಗಾಪುರದ ಮಂಡೈ ವೈಲ್ಡ್‌ಲೈಫ್ ರಿಸರ್ವ್‌ನ ರೇನ್‌ಫಾರೆಸ್ಟ್ ವೈಲ್ಡ್ ಏಷ್ಯಾದಲ್ಲಿ ನೋಡಬಹುದು.
ಇಂಟರ್ನೆಟ್ ಬಳಕೆದಾರರು “ಇದು ಜಂಗಲ್ ಫ್ಯಾಷನ್ ಐಕಾನ್”, “ನ್ಯಾಚುರಲ್ ಬ್ಯೂಟಿ” ಎಂದು ಕಾಮೆಂಟ್ ಮಾಡಿದ್ದು, ಡೌಕ್ ಲಂಗೂರ್ ಇದೀಗ ಸಾಮಾಜಿಕ ಜಾಲತಾಣಗಳ ಹೊಸ ‘ವೈರಲ್ ಸ್ಟಾರ್’ ಆಗಿದೆ.


