April 4, 2026
Saturday, April 4, 2026
spot_img

Viral | food ಡೆಲಿವರಿ ಬಾಯ್‌ಗೆ ಊಟ ನೀಡಿದ ಗ್ರಾಹಕ: ಎಮೋಷನಲ್ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀವನಕ್ಕಾಗಿ ದಿನವಿಡೀ ದುಡಿದು ಮನೆಮನೆಗೆ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಬದುಕಿನ ಹಿಂದೆ ಅನೇಕ ಕಾಣದ ಕಷ್ಟಗಳಿರುತ್ತವೆ. ಕೆಲವರು ಸಮಯಕ್ಕೆ ಆಹಾರ ತಲುಪಿಸದಿದ್ದರೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ದೆಹಲಿಯಲ್ಲಿ ನಡೆದ ಒಂದು ಸಣ್ಣ ಮಾನವೀಯ ಘಟನೆ ಇದೀಗ ಸಾವಿರಾರು ಜನರ ಮನ ಮುಟ್ಟಿದೆ.

ಆಹಾರ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ಗ್ರಾಹಕರೊಬ್ಬರು ಊಟಕ್ಕೆ ಆಹ್ವಾನ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗ್ರಾಹಕರು ಡೆಲಿವರಿ ಬಾಯ್‌ನ್ನು ಮನೆಗೆ ಒಳಗೆ ಕರೆದು ತಟ್ಟೆಯಲ್ಲಿ ಊಟ ಬಡಿಸುತ್ತಾರೆ. ತಾನು ಊಟ ಪಡೆಯುವ ಕ್ಷಣದಲ್ಲಿ ಆ ಯುವಕ ಭಾವುಕರಾಗಿ ಕಣ್ಣೀರಿಟ್ಟಿರುವುದು ಕಾಣಿಸುತ್ತದೆ.

ಇದನ್ನೂ ಓದಿ:

ಆಹಾರ ಸೇವಿಸುವ ವೇಳೆ ಮಾತನಾಡಿದ ಡೆಲಿವರಿ ಬಾಯ್, ಮನೆಯಿಂದ ಹೊರಡುವಾಗ ಕೇವಲ ಒಂದು ಕಪ್ ಚಹಾ ಮಾತ್ರ ಕುಡಿದಿದ್ದೆ ಎಂದು ಹೇಳುತ್ತಾನೆ. ಕೆಲಸದ ಮಧ್ಯೆ ಹಸಿವು ಇದೆ ಎಂಬುದೇ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುತ್ತಾ ತನ್ನ ಕುಟುಂಬದ ಬಗ್ಗೆ ಮಾತನಾಡುತ್ತಾನೆ. ನನಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ, ಅವರಿಗಾಗಿ ದುಡಿಯಲೇಬೇಕು ಎಂದು ಹೇಳುವಾಗ ಅವನ ಕಣ್ಣು ನೀರಿನಿಂದ ತುಂಬುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !