ಒಂದೆಡೆ ವೈರಲ್ ಜ್ವರದ ಹಾವಳಿ, ಮತ್ತೊಂದೆಡೆ ಕೊರೊನಾ.. ಬೆಂಗಳೂರು ಈಗ ಕೋವಿಡ್ ಹಾಟ್​ಸ್ಪಾಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆ 2020 ರ ಕೊನೆಯಲ್ಲಿ ದೇಶ ಪ್ರವೇಶಿಸಿದ್ದ ಕೊರೊನಾ ವೈರಸ್ ಮಹಾಮಾರಿ ಅದೆಷ್ಟೋ ಜನರನ್ನು ಬಲಿ ಪಡೆದಿತ್ತು. ಇದೀಗ ಕೋವಿಡ್ ಸೋಂಕು ಮತ್ತೆ ಅತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕೋವಿಡ್ ಸೋಂಕಿಗೆ ಬೆಂಗಳೂರೇ ಹಾಟ್​​ಸ್ಪಾಟ್ ಆಗುತ್ತಿರುವುದು ಹೆಚ್ಚಿನ ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇ 75 ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಸಕ್ರಿಯ ಪ್ರಕಣಗಳಲ್ಲಿಯೂ ಬೆಂಗಳೂರೇ ಮೇಲುಗೈ ಹೊಂದಿದೆ.

ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಪ್ರತಿ ದಿನ 36 ಕ್ಕೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಗರಿಷ್ಠ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!