ಮಳೆಗಾಲ ಬಂದರೆ ಜ್ವರ, ಶೀತ, ಕೆಮ್ಮು, ವೈರಲ್ ಸೋಂಕುಗಳ ಸರಮಾಲೆ ಶುರು. ಶೀತ ಅದೇನು ದೊಡ್ಡ ವಿಷ್ಯ ಅಲ್ಲ ಅನ್ನೋರು ಇಲ್ಲಿ ಕೇಳಿ. ಅದರಲ್ಲಿ ಗುಟ್ಟಾಗಿರೋ ವೈರಸ್‌ಗಳು ದೇಹದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಗೊತ್ತಾ?. ಮಳೆಗಾಲಕ್ಕೆ ಮುನ್ನ ಕೆಲವೊಂದು ಎಚ್ಚರಿಕೆ ವಹಿಸಿದರೆ, ವೈರಲ್ ಫೀವರ್ ಮತ್ತು ಇತರ ಸೋಂಕುಗಳಿಂದ ಆರಾಮಾಗಿ ದೂರ ಇರ್ಬಹುದು.
ಹೈಡ್ರೇಷನ್ ಮುಖ್ಯ – ನೀರು ಹೆಚ್ಚು ಕುಡಿಯಿ
ವೈರಲ್ ಸೋಂಕುಗಳ ವಿರುದ್ಧ ದೇಹ ಹೋರಾಡಬೇಕಾದರೆ, ನೀರಿನ ಪ್ರಮಾಣ ಸಮತೋಲನದಲ್ಲಿರಬೇಕು. ದಿನಕ್ಕೆ ಕನಿಷ್ಠ 8–10 ಗ್ಲಾಸ್ ನಿರು ಕುಡಿಯಿರಿ. ಲಿಂಬೆ ಹಣ್ಣು ನೀರು, ಅಥವಾ ಬಟರ್ ಮಿಲ್ಕ್ ಕೂಡ ಉತ್ತಮ ಆಯ್ಕೆ.
ಹೈಜೀನ್ ಪಾಲಿಸಿ – ಕೈ ತೊಳೆಯುವುದು ಕಡ್ಡಾಯ
ಮಳೆಗಾಲದಲ್ಲಿ ವೈರಸ್ ಹರಡುವ ಮುಖ್ಯ ರಸ್ತೆ – ಕೈ ಮತ್ತು ಮೂಗು. ಬಾಹ್ಯಸ್ಥಳಗಳಿಂದ ಮನೆಗೆ ಬಂದಾಗ, ಊಟಕ್ಕೂ ಮುನ್ನ ಸಾಬೂನು ಹಾಕಿ ಕೈ ತೊಳೆಯಿರಿ. ಬ್ಯಾಕ್ಟೀರಿಯಾ ಹರಡುವಿಕೆಯನ್ನು ತಡೆಗಟ್ಟಲು ಇದು ಅತ್ಯಂತ ಪರಿಣಾಮಕಾರಿ.
ತಾಜಾ, ಬಿಸಿ ಬಿಸಿಯಾಗಿ ತಯಾರಿಸಿದ ಆಹಾರ ಸೇವಿಸಿ
ಮಳೆಗಾಲದಲ್ಲಿ ಬೀದಿಯ ಆಹಾರದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಮನೆದಲ್ಲಿ ತಯಾರಿಸಿದ, ಬಿಸಿಯಾಗಿರುವ ಆಹಾರ ತಿನ್ನಿ. ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನಿ.
ಮಳೆಯ ನೀರಿನಲ್ಲಿ ನೆನೆದ ಬಳಿಕ ತಕ್ಷಣ ಬಟ್ಟೆ ಬದಲಿಸಿ
ಮಳೆಯ ನೀರಿನಲ್ಲಿ ನೆನೆದ ತಕ್ಷಣ ಬಟ್ಟೆಗೆ ಬದಲಿಸಿ. ಇವು ಶೀತ, ಜ್ವರಕ್ಕೆ ಕಾರಣವಾಗಬಹುದು. ಬಿಸಿ ಬಿಸಿ ಹೊಗೆಯಾಡುವ ನೀರಿನಲ್ಲಿ ಸ್ನಾನ ಮಾಡಿದರೆ ರೋಗಾಣುಗಳು ದೂರವಾಗುತ್ತವೆ.
ಇಮ್ಮ್ಯೂನಿಟಿ ಬೂಸ್ಟ್ ಮಾಡುವ ಆಹಾರಗಳ ಸೇವನೆ ಮಾಡಿ
ತುಳಸಿ, ಶುಂಠಿ, ಮೆಣಸು, ಬೆಳ್ಳುಳ್ಳಿ ಇವುಗಳ ಸೇವನೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿ ದಿನ ಒಂದು ಬೆಳ್ಳುಳ್ಳಿ ಗೆಡ್ಡೆ ಅಥವಾ ತುಳಸಿ ಕಷಾಯ ಸೇವಿಸಿದರೆ ವೈರಲ್ ಸೋಂಕಿಗೆ ಕಡಿವಾಣ ಹಾಕಬಹುದು.