Viral | ಯಾರಿಂದ? ನಿನ್ನಿಂದನಾ? ಏನೂ ನಿಂಗೆ ಬುದ್ಧಿ ಇಲ್ವಾ?.. ಸಹೋದರನ ವಿರುದ್ಧ ಹಿಟ್ ಮ್ಯಾನ್ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾಗೆ ವಿಶೇಷ ಗೌರವ ನೀಡಲಾಗಿದೆ. ಅದು ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿ ಹೊಸ ಸ್ಟ್ಯಾಂಡ್​ ಅನ್ನು ಅನಾವರಣಗೊಳಿಸುವ ಮೂಲಕ ಎಂಬುದು ವಿಶೇಷ. ಈ ವಿಶೇಷ ಕಾರ್ಯಕ್ರಮದ ರೋಹಿತ್ ಶರ್ಮಾ ಅವರ ಕುಟುಂಬಸ್ಥರು ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ರೋಹಿತ್ ಶರ್ಮಾ ಅವರು ಸಹೋದರ ವಿಶಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ. ಅದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ರೋಹಿತ್ ಶರ್ಮಾ ವಿಶಾಲ್ ಗೆ ತನ್ನ ಕಾರಿನ ಕಡೆಗೆ ಬೆರಳು ತೋರಿಸುತ್ತಾ, ಏನು ಇದು ಎಂದು ಡ್ಯಾಮೇಜ್​ ಆಗಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿಶಾಲ್ ರಿವರ್ಸ್ ತೆಗೆಯುವಾಗ ತಾಗಿದೆ ಎಂದು ಉತ್ತರಿಸಿದ್ದಾರೆ. ಯಾರಿಂದ? ನಿನ್ನಿಂದನಾ? ಎಂದು ರೋಹಿತ್ ಶರ್ಮಾ ಮರು ಪ್ರಶ್ನಿಸಿದ್ದಾರೆ. ಅತ್ತ ವಿಶಾಲ್ ಕಡೆಯಿಂದ ಉತ್ತರ ಬರುತ್ತಿದ್ದಂತೆ, ರೋಹಿತ್, ನಿನಗೇನು ಬುದ್ದಿ ಇಲ್ವಾ? ಎಂದು ಕೋಪಗೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!