VIRAL | ಆಟದ ಮಧ್ಯೆ ಪ್ರೇಕ್ಷಕನ ಟಿ-ಶರ್ಟ್ ಬದಲಿಸಿದ ಜಡೇಜಾ! ಕಾರಣ ಏನ್ ಗೊತ್ತ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ನಡೆದ ಒಂದು ವಿಶಿಷ್ಟ ಘಟನೆ ಚರ್ಚೆಗೆ ಕಾರಣವಾಗಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಸಮಯದಲ್ಲಿ ರವೀಂದ್ರ ಜಡೇಜಾ ಸಣ್ಣ ತೊಂದರೆಯೊಂದನ್ನು ಎದುರಿಸಿದರು. ಆದರೆ ಈ ತೊಂದರೆ ಬೌಲರ್‌ಗಳಿಂದಲೂ ಅಲ್ಲ, ಮೈದಾನದ ಪರಿಸ್ಥಿತಿಯಿಂದಲೂ ಅಲ್ಲ — ಬದಲಾಗಿ, ಗ್ಯಾಲರಿಯಲ್ಲಿದ್ದ ಪ್ರೇಕ್ಷಕರೊಬ್ಬರಿಂದ!

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುತ್ತಿದ್ದ ಜಡೇಜಾ ತಮ್ಮ ಗಮನವನ್ನು ಕೇಂದ್ರೀಕರಿಸಲು ವಿಫಲವಾಗುತ್ತಿದೆ ಎಂಬುದಾಗಿ ಆನ್-ಫೀಲ್ಡ್ ಅಂಪೈರ್ ಕುಮಾರ್ ಧರ್ಮಸೇನ ಅವರಿಗೆ ಸೂಚಿಸಿದರು. ಕಾರಣ, ಬೌಲರ್ ಎಂಡ್‌ನ ನೇರ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರೊಬ್ಬರು ರೆಡ್ ಬಣ್ಣದ ಟಿ-ಶರ್ಟ್ ಧರಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬಳಸುವ ಚೆಂಡು ಕೂಡ ಕೆಂಪು ಬಣ್ಣದ್ದೇ ಆಗಿರುವುದರಿಂದ, ಈ ರೀತಿ ಸಮಾನ ಬಣ್ಣದ ಹಿನ್ನೆಲೆ ಇದ್ದರೆ ಬ್ಯಾಟರ್‌ಗೆ ಚೆಂಡನ್ನು ಗುರುತಿಸುವಲ್ಲಿ ತೊಂದರೆ ಆಗುವುದು ಸಾಮಾನ್ಯ.

ಜಡೇಜಾ ಈ ವಿಚಾರವನ್ನು ಅಂಪೈರ್‌ಗಳಿಗೆ ತಿಳಿಸಿದ ಬಳಿಕ, ಅವರು ತಕ್ಷಣವೇ ಸ್ಟೇಡಿಯಂ ಸಿಬ್ಬಂದಿಗೆ ಮಾಹಿತಿ ನೀಡಿ, ಪ್ರೇಕ್ಷಕನಿಗೆ ಸ್ಥಳಾಂತರವಾಗಲು ಸೂಚಿಸಿದರು. ಆದರೆ ಪ್ರೇಕ್ಷಕ ಕುಳಿತಿದ್ದ ಜಾಗದಿಂದ ಎಳಲಿಲ್ಲ. ನಂತರ ಮೈದಾನದ ಸಿಬ್ಬಂದಿಯೊಬ್ಬರು ಬೂದು ಬಣ್ಣದ ಟಿ-ಶರ್ಟ್ ತರಿಸಿದರು. ತಕ್ಷಣವೇ ಆ ಪ್ರೇಕ್ಷಕ ತನ್ನ ರೆಡ್ ಟಿ-ಶರ್ಟ್ ಮೇಲೆ ಬೂದು ಟಿ-ಶರ್ಟ್ ಧರಿಸಿದರು. ಈ ಸಂದರ್ಭ ಜಡೇಜಾ ಥಂಬ್ಸ್-ಅಪ್ ಸೂಚನೆ ನೀಡುತ್ತಾ ತಮ್ಮ ಧನ್ಯತೆಯನ್ನು ವ್ಯಕ್ತಪಡಿಸಿದರು.

ಈ ಮಧ್ಯೆ ಜಡೇಜಾ 77 ಎಸೆತಗಳಲ್ಲಿ 53 ರನ್‌ ಗಳಿಸಿ ಟೀಮ್ ಇಂಡಿಯಾದ ಎರಡನೇ ಇನಿಂಗ್ಸ್‌ನಲ್ಲಿ 396 ರನ್‌ಗೆ ಪೂರಕವಾದ ಕೊಡುಗೆ ನೀಡಿದರು. ಈ ಘಟನೆಗೆ ಪ್ರೇಕ್ಷಕರಿಂದಲೂ ಮತ್ತು ಕ್ರಿಕೆಟ್ ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!