April 8, 2026
Wednesday, April 8, 2026
spot_img

Viral | ಬಾಯಾರಿದ ಮರಿಯಾನೆಗೆ ನೀರು ಕೊಟ್ಟ ಯುವಕನಿಗೆ ತಾಯಾನೆ ಏನ್ ಮಾಡಿತು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಮಮತೆ, ಕೃತಜ್ಞತೆ ಮತ್ತು ಮನುಷ್ಯರೊಂದಿಗೆ ಅವುಗಳ ನಂಟು ತೋರಿಸುವ ದೃಶ್ಯಗಳು ಯಾವಾಗಲೂ ಜನರ ಮನಸೆಳೆಯುತ್ತವೆ. ಇತ್ತೀಚೆಗೆ ಅಂತಹದೇ ಒಂದು ಮನಮುಟ್ಟುವ ವಿಡಿಯೋ ವೈರಲ್ ಆಗಿದ್ದು, ಬಾಯಾರಿದ ತನ್ನ ಮರಿಯಾನೆಗೆ ನೀರು ಕುಡಿಸಲು ಸಹಾಯ ಮಾಡಿದ ಯುವಕನಿಗೆ ತಾಯಾನೆ ಸೊಂಡಿಲೆತ್ತಿ ಧನ್ಯವಾದ ತಿಳಿಸಿದ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎಕ್ಸ್‌ನಲ್ಲಿ ಯೋಗ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ತಾಯಾನೆ ಮತ್ತು ಅದರ ಮರಿಯಾನೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಇದೇ ವೇಳೆ ಮರಿಯಾನೆಗೆ ತೀವ್ರ ಬಾಯಾರಿಕೆ ಆಗಿರುವಂತೆ ಕಂಡುಬರುತ್ತದೆ. ರಸ್ತೆ ಪಕ್ಕದ ಗಿಡಗಳಿಗೆ ಪೈಪ್ ಮೂಲಕ ನೀರು ಹಾಯಿಸುತ್ತಿದ್ದ ಯುವಕನ ಬಳಿ ಮರಿಯಾನೆ ತಕ್ಷಣ ಓಡಿಹೋಗುತ್ತದೆ.

ಇದನ್ನೂ ಓದಿ:

ಪರಿಸ್ಥಿತಿಯನ್ನು ಅರಿತ ಯುವಕ, ಪೈಪ್ ಅನ್ನು ಮರಿಯಾನೆಗೆ ನೀರು ಕುಡಿಯುವಂತೆ ಹಿಡಿದುಕೊಡುತ್ತಾನೆ. ಮರಿಯಾನೆ ತನ್ನ ಬಾಯಾರಿಕೆ ನೀಗುವಷ್ಟು ನೀರು ಕುಡಿದು ತೃಪ್ತಿಪಡುತ್ತದೆ. ನಂತರ ಅದರ ಪಕ್ಕದಲ್ಲಿದ್ದ ತಾಯಾನೆ ಸೊಂಡಿಲೆತ್ತಿ ಯುವಕನತ್ತ ತಿರುಗಿ ಕೃತಜ್ಞತೆಯ ಸೂಚನೆ ನೀಡುತ್ತದೆ. ಈ ಕ್ಷಣವೇ ನೆಟ್ಟಿಗರ ಮನಸ್ಸು ಗೆದ್ದಿದೆ.

ಹಲವರು “ಪ್ರಾಣಿಗಳಲ್ಲಿರುವ ಕೃತಜ್ಞತೆ ಮನುಷ್ಯರಿಗಿಂತ ಹೆಚ್ಚು” ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ತಾಯಿ ಪ್ರೀತಿಯ ಅಪೂರ್ವ ಉದಾಹರಣೆ ಎಂದು ಕೊಂಡಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !