March 23, 2026
Monday, March 23, 2026
spot_img

Viral | ಮದುವೆ ಆದ್ರೆ ಅದೇ ಹುಡುಗೀನಾ… ಇಲ್ಲಾಂದ್ರೆ! ಪ್ರೀತಿಯ ಹಠಕ್ಕೆ ಬಿದ್ದು ಹೈ-ವೋಲ್ಟೇಜ್ ತಂತಿ ಹಿಡಿದು ನೇತಾಡಿದ 15ರ ಪೋರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಾಪಗಢದಲ್ಲಿ ಅಚ್ಚರಿಯ ಘಟನೆ ಒಂದು ಜನರನ್ನು ಬೆಚ್ಚಿಬೀಳಿಸಿದೆ. ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ 15 ವರ್ಷದ ಬಾಲಕ, ಹೈ-ವೋಲ್ಟೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕುಟುಂಬದವರು ಮದುವೆಗೆ ಒಪ್ಪದೇ ಇದ್ದ ಕಾರಣ, ಆತ ಈ ರೀತಿಯ ಅಪಾಯಕಾರಿ ಹೆಜ್ಜೆ ಇಟ್ಟಿದ್ದಾನೆ.

ಸ್ಥಳೀಯರು ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ ಮಾಡಿಕೊಡುವುದಾಗಿ ಭರವಸೆ ನೀಡಿದ ನಂತರವೇ ಆತ ಕೆಳಗೆ ಇಳಿಯಲು ಒಪ್ಪಿಕೊಂಡಿದ್ದಾನೆ. ಸುಮಾರು 40 ನಿಮಿಷಗಳ ಕಾಲ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಬಾಲಕನನ್ನು ಕೊನೆಗೆ ಏಣಿ ಬಳಸಿ ಸುರಕ್ಷಿತವಾಗಿ ಕೆಳಗೆ ತರಲಾಯಿತು.

ಇದನ್ನೂ ಓದಿ:

ಕೆಳಗೆ ಬಂದ ತಕ್ಷಣ ಆತ ಭಾವೋದ್ರಿಕ್ತನಾಗಿ ಅಳಲು ಪ್ರಾರಂಭಿಸಿದ್ದಾನೆ. ತಿಳಿದುಬಂದಂತೆ, ಆತ 13 ವರ್ಷದ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ ಮನೆಯವರು ಮದುವೆಗೆ ಒಪ್ಪದಿದ್ದ ಕಾರಣ, ಈ ರೀತಿಯ ಹಠದ ನಡೆ ತೋರಿಸಿದ್ದಾನೆ.

ನಂತರ ಪೊಲೀಸರು ಬಾಲಕನನ್ನು ಠಾಣೆಗೆ ಕರೆದೊಯ್ದು, ಸಮಾಲೋಚನೆ ಮಾಡಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !