ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೋಝಿಕ್ಕೋಡ್ನಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಎರಂಜಿಪ್ಪಾಳಂ ಜಂಕ್ಷನ್‌ನಲ್ಲಿ ರೆಡ್ ಸಿಗ್ನಲ್ ತಪ್ಪಿಸಲು ಫುಟ್‌ಪಾತ್ ಮೇಲೆ ಸ್ಕೂಟರ್ ಚಲಾಯಿಸಿದ್ದ ಸವಾರನನ್ನು ಸುಮಾರು 60 ವರ್ಷದ ಮಹಿಳೆ ಧೈರ್ಯವಾಗಿ ತಡೆದಿದ್ದಾರೆ.
ಪಾದಚಾರಿಗಳಿಗಾಗಿ ಇರುವ ಫುಟ್‌ಪಾತ್ ಬಳಸಿ ಮುಂದೆ ಸಾಗಲು ಯತ್ನಿಸಿದ ಸವಾರನ ದಾರಿಯನ್ನು ಮಹಿಳೆ ನಿಲ್ಲಿಸಿ, ಮೊಬೈಲ್‌ನಲ್ಲಿ ವಾಹನದ ನೋಂದಣಿ ಸಂಖ್ಯೆಯ ಚಿತ್ರವನ್ನು ಫೋನ್ ನಲ್ಲಿ ಸೆರೆಹಿಡಿದ್ದಾರೆ. ಕೊನೆಗೆ ಸವಾರನು ಹಿಂತಿರುಗಿ ಮುಖ್ಯ ರಸ್ತೆಗೆ ಇಳಿದಿದ್ದಾರೆ.
ಇದನ್ನೂ ಓದಿ:
ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ನಾಗರಿಕ ಜವಾಬ್ದಾರಿಯ ಉದಾಹರಣೆಯಾಗಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಗುರುತು ಇನ್ನೂ ಬಹಿರಂಗವಾಗಿಲ್ಲ. ಕೇರಳ ಮೋಟಾರ್ ವಾಹನ ಇಲಾಖೆ ಅವರನ್ನು ಗುರುತಿಸಿ ಗೌರವಿಸಲು ಸಾರ್ವಜನಿಕರಿಂದ ಮಾಹಿತಿ ಕೋರಿದೆ.



