May 23, 2026
Saturday, May 23, 2026
spot_img

ವಿಜಯ್–ರಶ್ಮಿಕಾ ಮದುವೆ: OTT ಆಫರ್‌ಗೆ ‘ನೋ’ ಎಂದ ಜೋಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಹಾಟ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದೆ. ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹ ನಡೆಯಲಿದೆ ಎಂಬ ಮಾತು ಹರಿದಾಡುತ್ತಿದ್ದು, ಇದರ ನಡುವೆ ಮತ್ತೊಂದು ಹೊಸ ಮಾಹಿತಿ ಹೊರಬಿದ್ದಿದೆ. ಅಂತಾರಾಷ್ಟ್ರೀಯ ಒಟಿಟಿ ಸಂಸ್ಥೆಯಾದ Netflix ವಿವಾಹದ ವಿಡಿಯೋ ಸ್ಟ್ರೀಮಿಂಗ್ ಹಕ್ಕುಗಳಿಗೆ ಭಾರಿ ಮೊತ್ತದ ಆಫರ್ ನೀಡಿದರೂ, ಜೋಡಿ ಅದನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಮದುವೆ ಖಾಸಗಿ ವಿಚಾರವಾಗಿರಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಒಟಿಟಿಗೆ ಹಕ್ಕು ನೀಡಿದರೆ ಅನೇಕ ನಿಯಮಗಳು ಹಾಗೂ ನಿರ್ಬಂಧಗಳು ಬರಬಹುದು ಎಂಬ ಕಾರಣಕ್ಕೂ ಅವರು ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ:

ಈ ಹಿಂದೆ ನಯನತಾರಾ–ವಿಘ್ನೇಶ್ ಶಿವನ್ ಮದುವೆಯ ವೀಡಿಯೊ ಒಟಿಟಿಯಲ್ಲಿ ಬಿಡುಗಡೆಯಾಗಿ ಕಾನೂನು ಗೊಂದಲ ಎದುರಿಸಿದ್ದ ಉದಾಹರಣೆಯನ್ನೂ ಗಮನದಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ ಎಂಬ ಮಾತು ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !