April 11, 2026
Saturday, April 11, 2026
spot_img

Viral | ಈ ರಸ್ತೆ ಮುಸ್ಲಿಮರಿಗಲ್ಲ: ಹೆಣ್ಮಕ್ಕಳ ಕೆಲಸ ನೋಡಿ, ಇದೆಲ್ಲಾ ಬೇಕಿತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಏಕತೆಯ ಸಂದೇಶ ಸಾರಬೇಕಾದ ಹೆದ್ದಾರಿಯೇ ಈಗ ವಿವಾದದ ಕೇಂದ್ರವಾಗಿರುವ ಘಟನೆ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್–72ಎ ಮಾರ್ಗದಲ್ಲಿ ಪ್ರಚೋದಕ ಸ್ವರೂಪದ ಬರಹ ಕಾಣಿಸಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೆದ್ದಾರಿಯ ಪಕ್ಕದಲ್ಲಿ ಹಿಂದಿಯಲ್ಲಿ ಹಾಗೂ ಸಮೀಪದ ಎತ್ತರದ ಕಬ್ಬಿಣದ ಸೇತುವೆಯ ರೇಲಿಂಗ್ ಮೇಲೆ ಇಂಗ್ಲಿಷ್‌ನಲ್ಲಿ “ಈ ರಸ್ತೆ ಮುಸ್ಲಿಮರಿಗೆ ಅಲ್ಲ” ಎಂಬ ಸಂದೇಶವನ್ನು ಸ್ಪ್ರೇ ಪೇಂಟ್ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ದೂರು ನೀಡಿದ್ದು, ಬೆಹತ್‌ಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:

ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಜೈನ್ ಮಾಹಿತಿ ನೀಡಿದ್ದು, ಅಪರಿಚಿತ ಹಿಂದೂ ರಕ್ಷಾ ದಳ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 353(2) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ಸಾರ್ವಜನಿಕ ಕಿಡಿಗೇಡಿತನ ಹಾಗೂ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ಕೃತ್ಯಗಳಿಗೆ ಸಂಬಂಧಿಸಿದೆ.

ಇದೇ ವೇಳೆ ಘಟನೆಯೊಂದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರು ಯುವತಿಯರು ರೇಲಿಂಗ್ ಮೇಲೆ ಸ್ಪ್ರೇ ಪೇಂಟ್ ಮಾಡುವ ದೃಶ್ಯ ಕಾಣಿಸಿಕೊಂಡಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !