ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಬೀದಿಯಲ್ಲಿ ನಾಯಿ ಬೆಕ್ಕುಗಳು ಕಚ್ಚಾಡುವುದು ಸರ್ವೇ ಸಾಮಾನ್ಯ ಆದರೆ, ಇಲ್ಲೊಬ್ಬ ಮಾಲೀಕ ತನ್ನ ಮನೆಯ ಹೆಣ್ಣು ಬೆಕ್ಕಿನ ಹಿಂದೆ ಪಕ್ಕದ ಮನೆಯ ಗಂಡು ಬೆಕ್ಕು ಓಡಿ ಬಂದಿದೆ ಎಂದು ನೆರೆ ಮನೆಯವನೊಂದಿಗೆ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ದೇಶಪಾಂಡೆ ನಗರದ ಬಸ್ ಡಿಪೋ ಬಳಿ ಬೆಕ್ಕುಗಳ ಜಗಳದ ವಿಷಯಕ್ಕೆ ಅಕ್ಕಪಕ್ಕ ಮನೆದವರಲ್ಲಿ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಅಕ್ಕಪಕ್ಕದ ಮನೆಯವರ ನಡುವೆ ಹೊಡೆದಾಟ ನಡೆದಿದೆ.
ಹೆಣ್ಣು ಬೆಕ್ಕಿನ ಯಜಮಾನ ಇಫ್ಜಾನ್ ಎಂಬಾತ, ಗಂಡು ಬೆಕ್ಕಿನ ಮನೆಯವರಾದ ಅದ್ನಾನ್ ತಲೆಗೆ ಹಾಗೂ ಸಹೋದರ ಅರ್ಜಾನ್ ಮೂಗಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳೀಯರ ಸಹಕಾರದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಚಿಕಿತ್ಸೆಗೆ ಬರುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.