ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವುಗಳು ಮನುಷ್ಯರಿಗೆ ಮಾತ್ರವಲ್ಲ ಯಾವುದೇ ಜೀವಿಗಳಿಗೆ ಭಯಪಡುತ್ತವೆ. ಮನುಷ್ಯರಂತೂ ಹಾವು ಕಂಡರೆ ವಿಷವಿರಲಿ, ಇಲ್ಲದಿರಲಿ ಕಿಲೋ ಮೀಟರ್ ದೂರ ಓಡುತ್ತಾರೆ. ಈಗ ವೈರಲ್ ಆಗಿದೆ ವೀಡಿಯೊದಲ್ಲಿ ಹಸುವಿನ ಮುಂದೆ ಹೆಡೆ ಬಿಚ್ಚಿದ ಹಾವು ಬಂದರೂ ಹಸು ಹೆದರಿದೆ ತನ್ನ ನಾಲಗೆಯಿಂದ ಸವರಿದ ದೃಶ್ಯ ನಿಜಕ್ಕೂ ಆಶ್ಚರ್ಯವಾಗಿದೆ.
ಈ ವೀಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಇಬ್ಬರ ನಡುವಿನ ಶುದ್ಧ ಪ್ರೀತಿಯ ಮೂಲಕ ಒಬ್ಬರ ಮೇಲೆ ಮತ್ತೊಬ್ಬರಿಗೆ ಬಹಳ ನಂಬಿಕೆಯಿದೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅವರ ನಡುವಿನ ಬಾಂಧವ್ಯವನ್ನು ವಿವರಿಸುವುದು ಕಷ್ಟ ಎಂದರು.
ಈ ವೈರಲ್ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರಕೃತಿಯ ಯಾವುದೇ ಜೀವಿ ತನಗೆ ಹಾನಿಯನ್ನು ಬಯಸಿದರೆ ಮಾತ್ರ ಮತ್ತೊಂದು ಜೀವಿಗೆ ಹಾನಿ ಮಾಡುತ್ತದೆ ಹೊರತು ಇಲ್ಲವಾದರೆ ಏನೂ ಮಾಡುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Difficult to explain. The trust gained through pure love 💕 pic.twitter.com/61NFsSBRLS
— Susanta Nanda (@susantananda3) August 3, 2023