ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೆಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಎಲ್ಲಾ ಆನೆಗಳು ಒಟ್ಟಿಗೆ ಹೋಗುವುದನ್ನು ಕಂಡಿದ್ದೇವೆ. ಆದರೆ, ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಆನೆಗಳ ಗುಂಪು ಮಲಗಿದರೆ ಹೇಗಿರುತ್ತದೆ ಎಂದು ನೀವು ಎಂದಾದರೂ ನೋಡಿದ್ದೀರಾ?. ಆದರೆ ಈ ವಿಡಿಯೋ ನೋಡಿ.
ಕಾಡಿನಲ್ಲಿ ಮರಗಳ ನಡುವೆ ಹಾಯಾಗಿ ನಿದ್ರಿಸುತ್ತಿರುವ ಇವುಗಳನ್ನು ನೋಡಿದರೆ ಎಷ್ಟು ಚೆನ್ನ ಎಂದು ಅನಿಸದೇ ಇರದು. ಇದು ಚೀನಾಕ್ಕೆ ಸಂಬಂಧಿಸಿದ ವಿಡಿಯೋ. ಚೀನಾದಲ್ಲಿ ಆನೆಗಳ ಹಿಂಡು ವಲಸೆ ಹೋಗಿ ಬೇಸತ್ತಿವೆ. ಇದಲ್ಲದೆ, ಹವಾಮಾನವು ಉತ್ತಮವಾಗಿಲ್ಲ, ಆದ್ದರಿಂದ ಎಲ್ಲರೂ ದಾರಿಯಲ್ಲಿ ಒಟ್ಟಿಗೆ ವಿಶ್ರಾಂತಿ ಪಡೆದಿವೆ. ನೆಲದ ಮೇಲೆ, ಮರಗಳ ನಡುವೆ, ಮಲಗಿರುವ ವಿಡಿಯೋವನ್ನು ಡ್ರೋನ್ ಸಹಾಯದಿಂದ ತೆಗೆಯಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯ ನೋಡಿ ಹಲವು ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ.
Wild elephant herd migrating in China all sleep together
Via The Sun pic.twitter.com/qoyBCilOqE
— Gabriele Corno (@Gabriele_Corno) March 19, 2023