ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಧೋನಿಗೆ ವಿಶೇಷ ವಸ್ತು, ಉಡುಗೊರೆಗಳು ಬರುತ್ತಲೇ ಇರುತ್ತವೆ. ಅಂತೆಯೇ ಇಲ್ಲೊಬ್ಬ ಬಾಣಸಿಗ ವಿಭಿನ್ನವಾಗಿ ಕಲ್ಲಂಗಡಿ ಮೇಲೆ ಧೋನಿಯ ಭಾವಚಿತ್ರವನ್ನು ಬಿಡಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಂಕಿತ್ ಬಾಗ್ಯಾಲ್ ಎಂಬ ಬಾಣಸಿಗ ಕಲ್ಲಂಗಡಿ ಹಣ್ಣಿನ ಮೇಲೆ ಎಂಎಸ್ ಧೋನಿ ಅವರ ಚಿತ್ರವನ್ನು ಕೆತ್ತಿದ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಣ್ಣುಗಳು ಮತ್ತು ತರಕಾರಿಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸುವುದನ್ನು ಕಾಣಬಹುದು. ಈ ಕಲಾವಿದ ಕ್ಯಾಪ್ಟನ್ ಕೂಲ್ ಅವರ ಮುಖವನ್ನು ಕಲ್ಲಂಗಡಿ ಮೇಲೆ ನೈಜವಾಗಿ ಕೆತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಹಾಗೆಯೇ ಹಲವರು ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅಂಕಿತ್ ಅವರ ಈ ಕಲೆಯನ್ನು ಜನರು ಇಷ್ಟಪಡುತ್ತಿದ್ದು, ನೆಟ್‌ನಲ್ಲಿ ಟ್ರೆಂಡ್ ಆಗುತ್ತಿದೆ.
View this post on Instagram