VIRAL VIDEO| ಹಿಜಾಬ್‌ ಧರಿಸದಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ: ಮೊಸರು ತಲೆ ಮೇಲೆ ಸುರಿದು ದುಷ್ಕೃತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್‌ನ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆತ ಮಹಿಳೆಯರ ಮೇಲೆ ಹಲ್ಲೆ ನಡೆಸಲು ಕಾರಣ..ಆ ಇಬ್ಬರು ಮಹಿಳೆಯರು ಹಿಜಾಬ್ ಧರಿಸಿಲ್ಲ ಎಂದು. ತಾಯಿ ಮತ್ತು ಮಗಳು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮಶಾದ್‌ನ ಅಂಗಡಿಗೆ ಹೋದರು. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಅಂಗಡಿಯ ಬಳಿ ಬಂದು ಹಿಜಾಬ್ ಧರಿಸದಿರುವುದನ್ನು ಗಮನಿಸಿ ಇಬ್ಬರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಅಷ್ಟರಲ್ಲಿ ಥಟ್ಟನೆ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಮೊಸರಿನ ಪ್ಯಾಕೆಟ್‌ಗಳನ್ನು ಮಹಿಳೆಯರ ತಲೆಯ ಮೇಲೆ ಸುರಿದನು. ಏನಾಯಿತು ಎಂದು ಅರಿವಾಗುವ ಮೊದಲೇ ಮೊಸರು ನೆತ್ತಿಯ ಮೇಲೆ ಬಿದ್ದಿತ್ತು. ಕೂಡಲೇ ಸ್ಪಂದಿಸಿದ ಅಂಗಡಿ ಮಾಲೀಕರು ಮೊಸರು ಎರಚಿದ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದಾರೆ. ಮಹಿಳೆಯರ ಮೇಲೆ ಮೊಸರಿನಿಂದ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಹಿಜಾಬ್ ಧರಿಸದ ಮಹಿಳೆಯರ ಮೇಲೂ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರನ್ನೂ ಬಂಧಿಸಿ, ಮೊಸರು ದಾಳಿಕೋರನನ್ನು ಕೂಡ ಕಂಬಿ ಹಿಂದೆ ಕಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರನ್ನು ಅವಮಾನಿಸಿದ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದಿದ್ದಕ್ಕಾಗಿ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ. ಹಿಜಾಬ್ ಧರಿಸದ ಮಹಿಳೆಯರನ್ನು ಅಂಗಡಿಗೆ ಪ್ರವೇಶಿಸಲು ಅನುಮತಿಸುವ ಮೂಲಕ ಕಾನೂನು ಪಾಲಿಸದ ಅಂಗಡಿಯ ಮಾಲೀಕರಿಗೆ ಅವರು ನೋಟಿಸ್ ನೀಡಿದರು.

ಇರಾನ್ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದೆ ಕಾಣಿಸಿಕೊಳ್ಳುವ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಇರಾನ್‌ನ ನ್ಯಾಯಾಂಗ ಮುಖ್ಯಸ್ಥರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ಕಾನೂನಿನ ಪ್ರಕಾರ ಏಳು ವರ್ಷ ವಯಸ್ಸಿನ ಹುಡುಗಿಯರು ಸೇರಿದಂತೆ ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸಬೇಕು. ಹಿಜಾಬ್ ವಿರುದ್ಧ ದೇಶದ ಮಹಿಳೆಯರು ಸಾಮೂಹಿಕ ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!