ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀನು ಶಾಲೆಗೆ ಹೋಗುವುದು ಬೇಡ ಎಂದ ತಂದೆಗೆ ಬಾಲಕಿ ಸರಿಯಾದ ದಿಟ್ಟ ಉತ್ತರ ಕೊಟ್ಟಿದ್ದು, ಗಂಡುಮಕ್ಕಳೇ ಓದಲಿ ಎಂಬ ತಂದೆಯ ಮಾತಿಗೆ ಮಗಳ ಉತ್ತರ ಕೇಳಿದರೆ ಆಶ್ಚರ್ಯವಾಗುತ್ತದೆ. ಇದಲ್ಲದೆ, ದೇಶದ ಬಗ್ಗೆ ಆಕೆಯ ಮಾತುಗಳು ಕೂಡ ತುಂಬಾ ಸ್ಪೂರ್ತಿದಾಯಕವಾಗಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಶಾಲೆಗೆ ಹೋಗುವ ಕನಸು ಕಾಣುವ ಮಗು ಮತ್ತು ಶಾಲೆ ಗಂಡುಮಕ್ಕಳಿಗೆ ಮಾತ್ರ ಎಂದು ಹೇಳುವ ತಂದೆಯ ನಡುವಿನ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಥೀಫ್ಘನ್ ಹಂಚಿಕೊಂಡಿರುವ ವಿಡಿಯೋದಲ್ಲಿ ತಂದೆ-ಮಗಳ ಸಂಭಾಷಣೆ ವೈರಲ್ ಆಗುತ್ತಿದೆ. ‘ಹುಡುಗರೇ ಓದಬೇಕು.. ನಿಮ್ಮ ಅಣ್ಣನನ್ನೇ ಶಾಲೆಗೆ ಕಳುಹಿಸುತ್ತೇನೆ’ ನೀನ್ಯಾಕೆ ಓದಬೇಕು. ನೀನು ಶಾಲೆಗೆ ಹೋದರೆ ನೀವು ಏನು ಸಾಧಿಸುತ್ತೀರಿ? ಎಂದ ತಂದೆಗೆ ‘ನಾನು ವೈದ್ಯ ಅಥವಾ ಶಿಕ್ಷಕನಾಗುತ್ತೇನೆ’ ಎಂದು ಘಾಂಭೀರ್ಯವಾಗಿ ಉತ್ತೆ ಕೊಟ್ಟಿದ್ದಾಳೆ.
ಶಿಕ್ಷಣದಲ್ಲಿ ಲಿಂಗ ಭೇದವಿಲ್ಲ ಮತ್ತು ಶಿಕ್ಷಣ ಎಲ್ಲರ ಆಸ್ತಿ ಎಂಬ ಮಾತನ್ನು ಒತ್ತಿ ಹೇಳಿದ್ದಾಳೆ. ‘ಜನ ನಾಶಪಡಿಸುವ ವಸ್ತುಗಳು ಯಾವುವು?’ ಎಂದು ಆಕೆಯ ತಂದೆ ಕೇಳಿದಾಗ, ‘ಕಾಬೂಲ್‌ನಿಂದ ಕಂದಹಾರ್‌ವರೆಗೆ ಎಷ್ಟು ಸ್ಥಳಗಳು ನಾಶವಾಗಿವೆ ಎಂದು ಹೋಗಿ ನೋಡು’ ಎಂದು ತನ್ನ ತಂದೆಗೆ ಉತ್ತರಿಸಿದಳು. ಮೇಲಾಗಿ ‘ನಮ್ಮ ದೇಶವನ್ನು ಮತ್ತೆ ಕಟ್ಟಬೇಕು’ ಎಂದು ಬಹಳ ಬುದ್ಧಿವಂತಿಕೆಯಿಂದ ಹೇಳಿದಳು. ಆಫ್ಘನ್‌ನಲ್ಲಿ ಹೆಣ್ಣುಮಕ್ಕಳು ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿ ಈಗಾಗಲೇ ಒಂದು ವರ್ಷ ಕಳೆದಿದೆ. ಈ ವೇಳೆ ಈ ಮಗುವಿನ ಮಾತು ವೈರಲ್ ಆಗಿದೆ.
ಈ ವೀಡಿಯೋ ನೋಡಿದರೆ ಮಗುವಿನ ಬುದ್ದಿವಂತಿಕೆ, ಆತ್ಮಸ್ಥೈರ್ಯ ತಿಳಿಯುತ್ತದೆ. ದೇಶವನ್ನು ಮರುನಿರ್ಮಾಣ ಮಾಡಬೇಕು ಎಂಬ ಬಾಲಕಿಯ ಪ್ರಬುದ್ಧತೆಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ.