ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸಂಸ್ಕೃತಿ, ಸಂಪ್ರದಾಯ, ಹಬ್ಬ-ಹರಿದಿನ, ಆಚಾರ-ವಿಚಾರಕ್ಕೆ ಮಾರುಹೋಗದವರಿಲ್ಲ. ನಮ್ಮ ಎಲ್ಲಾ ಆಚರಣೆಗಳು ದೇಶ-ವಿದೇಶಗಳಲ್ಲಿ ನೆಲೆಸಿರುವ ಜನರೂ ಸಹ ಗೌರವಿಸುತ್ತಾರೆ. ಅನೇಕ ಹಬ್ಬಗಳಿಗೆ ಅಂತಾರಷ್ಟ್ರೀಯ ನಾಯಕರು ಶುಭಾಶಯ ತಿಳಿಸಿರುವ ಸನ್ನಿವೇಶಗಳೂ ಇವೆ. ಅದಕ್ಕೆ ಉದಾಹರಣೆಯೆಂಬಂತಿದೆ ಈ ವಿಡಿಯೋ.
ಸಾಮಾಜಿಕ ಜಾಲತಾಣದಲ್ಲಿ ಲಂಡನ್ನ ರಕ್ಷಣಾ ಮತ್ತು ಪ್ರಧಾನಿ ಕಚೇರಿ ಸಿಬ್ಬಂದಿ ಮಕರ ಸಂಕ್ರಾಂತಿ ಆಚರಣೆ ಎನ್ನುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಜನವರಿ 15ರಂದು ಇಡೀ ಭಾರತದಾದ್ಯಂತ ಅತ್ಯಂತ ಅದ್ದೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗಿತ್ತು. ಅದೇ ರೀತಿ ಲಂಡನ್ನಲ್ಲೂ ಕೂಡ ಹಬ್ಬ ಆಚರಣೆ ಮಾಡಲಾಗಿದೆ ಎಂಬ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video of UK defense & PM's office staff celebrating Pongal/Makar Sankranti festival.
A welcome change 🇮🇳 pic.twitter.com/CZXAjSxZLy
— Megh Updates 🚨™ (@MeghUpdates) January 17, 2023
ಕಚೇರಿ ಸಿಬ್ಬಂದಿಯೆಲ್ಲಾ ಒಟ್ಟಿಗೆ ಔತಣಕೂಟಕ್ಕೆ ಕುಳಿತಿದ್ದು, ಭಾರತೀಯ ಸಾಂಪ್ರದಾಯಿಕ ಶೈಲಿಯ ಬಾಳೆಎಲೆಯಲ್ಲಿ ವಿವಿಧ ರೀತಿಯ ಭಾರತೀಯ ಖಾದ್ಯಗಳನ್ನು ಸವಿಯುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ವಿಡಿಯೋಗೆ ನೆಟ್ಟಿಗರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.