VIRAL VIDEO| ಮೊಮೊಸ್ ಮಾರುವ ವ್ಯಕ್ತಿ ಬಾಯಲ್ಲಿ ನಿರರ್ಗಳ ಇಂಗ್ಲೀಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಷಿಯಲ್ ಮೀಡಿಯಾದಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಪ್ರತಿಭೆ ಅನಾವರಣವಾಗುವ ವಿಡಿಯೋಗಳು ಜನರನ್ನು  ಮೆಚ್ಚಿಸುತ್ತವೆ. ಅಂಥಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವಿವರಗಳಿಗೆ ಹೋದರೆ… ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಕ್ನೋದಲ್ಲಿ ಒಂದು ಕುತೂಹಲಕಾರಿ ದೃಶ್ಯ ಕಂಡುಬಂತು. ಲಕ್ನೋದ ರಸ್ತೆಯ ಒಂದು ಬದಿಯಲ್ಲಿ ಮಧ್ಯವಯಸ್ಕರೊಬ್ಬರು ಬಿಸಿಬಿಸಿ ಮೊಮೊಸ್‌ಗಳನ್ನು ಮಾರುತ್ತಿದ್ದ. ‘ಈ ಮೊಮೊಸ್‌ಗಳು ಹೋಮ್ ಮೇಡ್, ಬಹಳ ಶುಚಿಯಾಗಿ, ರುಚಿಯಾಗಿವೆ ಎಂದು ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ತಮ್ಮ ವ್ಯಾಪಾರವನ್ನು ಪ್ರಚಾರ ಮಾಡುತ್ತಿರುವುದು ಎಲ್ಲರ ಮನಗೆದ್ದಿದೆ.

ಯುವಕನೊಬ್ಬ ಆತನ ಬಳಿ ತೆರಳಿ ನೀವು ಇಂಗ್ಲಿಷ್ ಹೇಗೆ ಚೆನ್ನಾಗಿ ಮಾತನಾಡಲು ಕಲಿತದ್ದು ಎಂದು ಕೇಳುತ್ತಾನೆ.. ನಾನು ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದಾಗ ಯುವಕ ಶಾಕ್ ಆಗಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!