ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಟರ್‌ನೆಟ್‌ನಲ್ಲಿ ಕೆಲವು ವೀಡಿಯೋಗಳನ್ನು ನೋಡಿದ್ರೆ ಭಯವಾಗುತ್ತದೆ.. ಕೆಲವು ವಿಚಾರ ಪ್ರಚೋದಕ.. ಕೆಲವು ಸ್ಫೂರ್ತಿದಾಯಕವೂ ಹೌದು. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸುವ ರೀತಿ ನೋಡುಗರಿಗೆ ಭಯ ಹುಟ್ಟಿಸುವಂತಿದೆ.
ಟೆಕ್ನಿವರ್ಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊ 25 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಮಹಿಳೆಯೊಬ್ಬರು ಗೋದಾಮಿನಲ್ಲಿ ಅಕ್ಕಿ ಚೀಲಗಳ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದಾರೆ. ಕೂಲಿಕಾರರು ಅಕ್ಕಿ ಮೂಟೆ ಹೊತ್ತು ಸಾಗುತ್ತಿದ್ದಾಗ ಡಿಟೆಕ್ಟರ್ ಸಹಾಯದಿಂದ ಅಕ್ಕಿಯನ್ನು ಪರೀಕ್ಷಿಸುವ ವಿಧಾನ ಭಯ ಹುಟ್ಟಿಸುವಂತಿತ್ತು. ಆಕೆಳು ಬಳಸುವ ಡಿಟೆಕ್ಟರ್ ಮನುಷ್ಯರ ಪ್ರಾಣವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಚಾಕುವಿನಂತೆ ಚೂಪಾದ ಡಿಟೆಕ್ಟರ್ ಕಾರ್ಮಿಕರ ದೇಹ ಹೊಕ್ಕರೆ ದೊಡ್ಡ ಅನಾಹುತವೇ ನಡೆಯುತ್ತದೆ.
ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಡಿಟೆಕ್ಟರ್ ತುಂಬಾ ತೀಕ್ಷ್ಣವಾಗಿ ಕಾಣುತ್ತದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಚೀಲ ಹೊತ್ತವರು ಸ್ವಲ್ಪ ಹುಷಾರಾಗಿರಬೇಕು ಅನ್ನಿಸುತ್ತದೆ ಎನ್ನುತ್ತಿದ್ದಾರೆ.