ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಅಭಿಮಾನಿಗಳ ನಡುವಿನ ಸ್ಪರ್ಧೆ ಹೊಸದೇನಲ್ಲ. ಆದರೆ ಈ ಬಾರಿ ಅದು ಚಿತ್ರಮಂದಿರದೊಳಗೆ ಗಂಭೀರ ಗಲಾಟೆಗೆ ಕಾರಣವಾಗಿದೆ. ಅಜಿತ್ ಅಭಿನಯದ ಸೂಪರ್‌ಹಿಟ್ ಸಿನಿಮಾ ‘ಮಂಗಾತ’ ಮರುಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವ ನಡುವೆಯೇ, ಅಭಿಮಾನಿಗಳ ಮಧ್ಯೆ ಗಲಾಟೆ ನಡೆದಿದೆ.
ತಮಿಳುನಾಡಿನ ಒಂದು ಚಿತ್ರಮಂದಿರದಲ್ಲಿ ‘ಮಂಗಾತ’ ಪ್ರದರ್ಶನ ನಡೆಯುತ್ತಿದ್ದ ವೇಳೆ, ವಿಜಯ್ ಅಭಿಮಾನಿಯೊಬ್ಬರು ಟಿವಿಕೆ (ವಿಜಯ್ ಸ್ಥಾಪಿಸಿದ ರಾಜಕೀಯ ಪಕ್ಷ) ಬಾವುಟವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಕೋಪಗೊಂಡ ಅಜಿತ್ ಅಭಿಮಾನಿಗಳು ಆ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಲಾಟೆಯಲ್ಲಿ ವಿಜಯ್ ಅಭಿಮಾನಿಗೆ ಥಳಿಸಿದ್ದು ಬಟ್ಟೆ ಹರಿದುಹೋಗುವಷ್ಟು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



