October 10, 2026
Saturday, October 10, 2026
spot_img

ವಿಜಯ್–ಸಂಗೀತಾ ವಿಚ್ಛೇದನಕ್ಕೆ ತ್ರಿಶಾ ಕಾರಣ ಅಂತೆ: ನಟಿಯನ್ನು ಹೋಮ್ ಬ್ರೇಕರ್ ಎಂದ ಟ್ರೋಲಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಚಿತ್ರರಂಗದಲ್ಲಿ ತಮಿಳು ಸೂಪರ್ ಸ್ಟಾರ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಬಿರುಕು ಮೂಡಿದೆ ಎಂಬ ವದಂತಿ ವೇಗವಾಗಿ ಹರಡುತ್ತಿದೆ. 25 ವರ್ಷಗಳಿಂದ ಜೊತೆಯಾಗಿ ಬದುಕುತ್ತಿರುವ ಈ ಜೋಡಿ ವಿಚ್ಛೇದನದ ಹಂತ ತಲುಪಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಊಹಾಪೋಹಗಳ ಮಧ್ಯೆ ನಟಿ ತ್ರಿಶಾ ಕೃಷ್ಣನ್ ಅನಗತ್ಯವಾಗಿ ಗುರಿಯಾಗಿದ್ದಾರೆ.

ವಿಜಯ್ ಅವರ ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲೂ ಹಾಗೂ ಇತ್ತೀಚಿನ ಚಿತ್ರ ಸಮಾರಂಭಗಳಲ್ಲೂ ಸಂಗೀತಾ ಕಾಣಿಸಿಕೊಳ್ಳದಿರುವುದು ವದಂತಿಗೆ ಕಾರಣವಾಗಿದೆ. ಇದೇ ವೇಳೆ ವಿಜಯ್–ತ್ರಿಶಾ ಜೋಡಿ ಲಿಯೋ ಚಿತ್ರದ ಮೂಲಕ ಮತ್ತೆ ಒಂದಾದ ನಂತರ ಅವರ ಸ್ನೇಹದ ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ:

ಕೆಲವರು ತ್ರಿಶಾ ಅವರನ್ನು “ಹೋಮ್ ಬ್ರೇಕರ್” ಎಂದು ಟ್ರೋಲ್ ಮಾಡುತ್ತಿದ್ದು, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಅವಹೇಳನಕಾರಿ ಕಾಮೆಂಟ್‌ಗಳು ಹರಿದಾಡುತ್ತಿವೆ. ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲದಿದ್ದರೂ ಊಹಾಪೋಹಗಳ ಆಧಾರದ ಮೇಲೆ ನಟಿಯ ವಿರುದ್ಧ ಸೈಬರ್ ದಾಳಿ ನಡೆಯುತ್ತಿರುವುದು ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯ್ ಅಥವಾ ಕುಟುಂಬದವರು ಪ್ರತಿಕ್ರಿಯಿಸುವವರೆಗೂ ಈ ವಿವಾದ ಮುಂದುವರಿಯುವ ಸಾಧ್ಯತೆ ಇದೆ.

Must Read