ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿಯ ನಿರಿಂಬಾ ಫೀಲ್ಡ್ಸ್ ಪ್ರದೇಶದಲ್ಲಿ ಭಾರತೀಯ ಸಮುದಾಯದ ಸದಸ್ಯರು ಭರ್ಜರಿ ದೀಪಾವಳಿ ಹಬ್ಬವನ್ನು ಆಚರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಸ್ಟ್ರೇಲಿಯಾದ ಮಹಿಳೆ ಕೋಬಿ ಥ್ಯಾಚರ್ ಈ ದೃಶ್ಯವನ್ನು ಹಂಚಿಕೊಂಡು “ಈ ಮನೆಗಳು ಕ್ರಿಸ್‌ಮಸ್‌ಗಾಗಿ ಅಲ್ಲ, ದೀಪಾವಳಿಗಾಗಿ ಬೆಳಗುತ್ತಿವೆ. ನಾವು ನಮ್ಮದೇ ಆದ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಉಳಿಸುವ ಪ್ರಯತ್ನ ಮಾಡಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಅನ್ನು ಹಂಚಿದ ತಕ್ಷಣವೇ ನೆರೆಹೊರೆಯವರು ಹಾಗೂ ವಿದೇಶಿ ಬಳಕೆದಾರರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮತ್ತು ಚರ್ಚೆ ಪ್ರಾರಂಭವಾಗಿದೆ.
ಕೆಲವು ಭಾರತೀಯರು ಆಸ್ಟ್ರೇಲಿಯಾದಲ್ಲಿನ ತಮ್ಮ ಸಂಸ್ಕೃತಿಯನ್ನು ಉಳಿಸಲು, ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಮತ್ತೊಂದು ಪೋಸ್ಟ್ ಹಾಕಿದ ಕೋಬಿ ಥ್ಯಾಚರ್ “ಇದು ಆಸ್ಟ್ರೇಲಿಯಾ ಭಾರತವಲ್ಲ, ನೀವು ಬದಲಾವಣೆ ಮಾಡಲು ಸಾಧ್ಯವಿಲ್ಲ ಬೇಕಾದರೆ ದೇಶವನ್ನು ಬಿಡಿ, ನಿಮಗಾಗಿ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳುದಿಲ್ಲ ಎಂದು ಹೇಳಿದ್ದಾರೆ.” ಎಂದು ಪ್ರತಿಕ್ರಿಯಿಸಿದ್ದಾರೆ.

