ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವಿಡಿಯೋಗೆ ಖ್ಯಾತ ನಿರ್ದೇಶಕ ಸಿದ್ಧಾರ್ಥ್ ಆನಂದ್ ನೀಡಿದ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ಪಡೆದಿದೆ. ಹಳೆಯ ಶಾಲಾ ಗೆಳೆಯನನ್ನು ಡಿಲಿವರಿ ಬಾಯ್ ಎಂದು ಹಾಸ್ಯ ಮಾಡಿರುವ ಮಹಿಳೆಯ ವಿಡಿಯೋಗೆ ಪ್ರತಿಕ್ರಿಯಿಸಿದ ಅವರು, ಆ ಯುವಕನನ್ನು “ನಿಜವಾದ ಹೀರೋ” ಎಂದು ಕರೆದು, ದುಡಿಯುವ ಕೆಲಸದ ಗೌರವವನ್ನು ನೆನಪಿಸಿದ್ದಾರೆ.
ಎಕ್ಸ್ (X)ನಲ್ಲಿ ಸಫ್ರಾನ್ ಚಾರ್ಜರ್ಸ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮಹಿಳೆಯೊಬ್ಬಳು ತನ್ನ ಶಾಲಾ ದಿನಗಳ ಗೆಳೆಯನನ್ನು ರಸ್ತೆಯಲ್ಲಿ ಭೇಟಿಯಾಗಿ ಅವನು ಡಿಲಿವರಿ ಕೆಲಸ ಮಾಡುತ್ತಿರುವುದನ್ನು ಹಾಸ್ಯ ಮಾಡುತ್ತಾಳೆ. ವಿಡಿಯೋದಲ್ಲಿ ಆತ ನಗುತ್ತಾ ಕಾಣಿಸಿಕೊಂಡರೂ, ಅಸಹಜತೆ ಸ್ಪಷ್ಟವಾಗುತ್ತದೆ. ಈ ಕ್ಲಿಪ್ ನಂತರದಲ್ಲಿ ಸ್ಕ್ರಿಪ್ಟೆಡ್ ಎಂದು ಹೇಳಲಾಗಿದ್ರೂ, ಅದರ ಸಂದೇಶ ಜನರನ್ನು ತಟ್ಟಿದೆ.
ಇದನ್ನೂ ಓದಿ:
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಸಿದ್ಧಾರ್ಥ್ ಆನಂದ್, “ನೀನು ನಿಜವಾದ ಹೀರೋ. ನೀನು ಪ್ರಾಮಾಣಿಕವಾಗಿ ದುಡಿಯುತ್ತಿದ್ದೀಯ. ಯಾರ ಮೇಲೂ ಭಾರವಾಗದೇ ಜೀವನ ನಡೆಸುತ್ತಿದ್ದೀಯ. ಯಾವುದೇ ಕೆಲಸ ಚಿಕ್ಕದಲ್ಲ” ಎಂದು ಬರೆದಿದ್ದಾರೆ. ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿವೆ.



