ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾನಪದ ಕಲಾತಂಡಗಳ ಕಲಾ ಪ್ರದರ್ಶನ, ಕರ್ನಾಟಕ, ಕೇರಳರಾಜ್ಯಗಳ ಅದ್ಭುತ ಕಲಾ ತಂಡಗಳು ಭವ್ಯ ಸಾಂಸ್ಕೃತಿಕ ಮೆರವಣಿಗೆ ಮೆರುಗು ಹೆಚ್ಚಿಸಿತು. ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಸುಮಾರು ಒಂದೂವರೆ ಗಂಟೆಗಳಕಾಲ ನಡೆದ ಅದ್ಭುತ ಭವ್ಯ ಸಾಂಸ್ಕೃತಿಕ ಮೆರವಣಿಗೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಸೇರಿದ್ದ ೫೦ಸಹಸ್ರಕ್ಕೂ ಅಧಿಕ ಪ್ರೇಕ್ಷಕರು ಕಲಾ ತಂಡಗಳ ಕಲಾ ಪ್ರದರ್ಶನದ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
125 ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆಯಲ್ಲಿ ಶಂಖ, ದಾಸಯ್ಯ, ಕೊಂಬು, ಕಹಳೆ, ರಣಕಹಳೆ, ಗಣಪತಿ, ಕೊರಗರ ಡೋಲು, ನಂದೀಧ್ವಜ, ಘಟೋತ್ಕಜ, ಊರಿನ ಚೆಂಡೆ, ತಟ್ಟೀರಾಯ, ಸ್ಯಾಕ್ಸೋಫೋನ್, ಕೊಡೆಗಳು, ಪೂರ್ಣಕುಂಭ,ನಾದಸ್ವರ, ಲಂಗದಾವಣಿ, ಅಪ್ಸರೆಯರು, ಯಕ್ಷಗಾನ ವೇಷ, ಕಿಂಗ್ ಕೋಂಗ್, ಗೂಳಿ ಕಟ್ಟಪ್ಪ, ಆಂಜನೇಯ ವಾನರ ಸೇನೆ, ಮರಕಾಲು, ವಿಚಿತ್ರ ಮಾನವ,ಕಂಬಳ, ಸೋಮನ ಕುಣಿತ, ಶಿವ, ಮಹಾಕಾಳೇಶ್ವರ, ಆಂಜನೇಯ ವಾನರ ಸೇನೆ, ಮರಕಾಲು, ಶಿವ, ಅಘೋರಿಗಳು, ಶಿಲ್ಪ ಗೊಂಬೆ ಬಳಗದ ಗೊಂಬೆಗಳು, ಸ್ನೇಹ ಗೊಂಬೆ ಬಳಗದ ಗೊಂಬೆಗಳು, ವಂಶಿಕಾ ಗೊಂಬೆ ಬಳಗದ ಗೊಂಬೆಗಳು, ಬಿದಿರೆ ಆರ್ಟ್ಸ್ ಗೊಂಬೆಗಳು, ಶೆಟ್ಟಿ ಆರ್ಟ್ಸ್ ಗೊಂಬೆಗಳು, ಆಳ್ವಾಸ್ ಗೊಂಬೆ ಬಳಗದ ಗೊಂಬೆಗಳು, ಆಳ್ವಾಸ್ ಕಾರ್ಟೂನ್ಸ್, ಬೆಂಗಳೂರು ಬೊಂಬೆ, ಚಿತ್ರದುರ್ಗ ಬ್ಯಾಂಡ್, ವಾರ್ ಕ್ರಾಫ್ಟ್, ಕಿಂದರಿ ಜೋಗಿ, ಗೊರವರ ಕುಣಿತ, ಹುಲಿವೇಷ, ಪೂಜಾಕುಣಿತ, ಜೋಡಿ ಸಿಂಹ, ಜೋಡಿ ಜಿಂಕೆ, ಬೆಂಡರ ಕುಣಿತ, ಗಿಡುಗ, ಮಂಗ, ಪಟದ ಕುಣಿತ, ಮಹಿಳಾ ಪಟದ ಕುಣಿತ, ಕೋಳಿಗಳು, ತಮಟೆ ವಾದನ, ಕಾಟೂರ್ನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಹಗಲು ವೇಷ, ಶ್ರೀಲಂಕಾ ಕಲಾವಿದರು, ಕೇರಳದ ಕಮಲ ವೇಷ, ತಮಿಳುನಾಡಿನ ನೃತ್ಯ, ಕೆರಳದ ಚಿಟ್ಟೆ ವೇಷ, ಕೊಂಚಾಡಿ ಚೆಂಡೆ, ಕೇರಳದ ದೇವರ ವೇಷ, ಕೇರಳದ ಬಿಳಿ ವೇಷ, ಆಳ್ವಾಸ್ ಡೊಳ್ಳು ಕುಣಿತ, ಕೇರಳದ ನವಿಲುಗರಿ ವೇಷ, ಕೇರಳದ ಬೆಲೂನ್ ವೇಷ, ಹಕ್ಕಿ ಹುಡುಗಿ, ಈಶಾನ್ಯ ಭಾರತದ ವಿಶೇಷ ಪ್ರಕಾರ, ನಾಸಿಕ್ ಬ್ಯಾಂಡ್, ತೆಯ್ಯಮ್, ಆಳ್ವಾಸ್ ಬ್ಯಾಂಡ್ ಸೆಟ್, ಎನ್ ಸಿಸಿ ನೇವಲ್, ಆರ್ಮಿ, ಏರ್ ಫೋರ್ಸ್ ಸ್ಕೌಟ್ಸ್ ಗೈಡ್ಸ್, ರೋವರ್ಸ್ ರೇಂಜರ್ಸ್ ಮೊದಲಾದ ತಂಡಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದವು.
ಸುಮಾರು 125 ಕಲಾತಂಡಗಳನ್ನೊಳಗೊಂಡ ಭವ್ಯ ಮೆರವಣಿಗೆಯಲ್ಲಿ 5000 ಕ್ಕೂ ಮಿಕ್ಕಿದ ಕಲಾವಿದರು ಪಾಲ್ಗೊಂಡಿದ್ದು ವಿಶೇಷ.