ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಂಗ್ ಕೊಹ್ಲಿ ಅವರದ್ದು ಬೋಲ್ಡ್ ಕ್ಯಾರೆಕ್ಟರ್. ಕೋಪಗೊಂಡಾಗ ದಿಢೀರ್ ಉತ್ತರ ನೀಡುವ ಆಕ್ರಮಣಕಾರಿ ಕ್ರಿಕೆಟಿಗ ಕೊಹ್ಲಿ. ಇಂತಹ ಕೊಹ್ಲಿ ಮ್ಯಾಚ್ ರೆಫ್ರಿ ಬಳಿ ಕ್ಷಮಿಸಿ ಬಿಡಿ ಅಂತ ಬೇಡಿದ್ರಂತೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಅಲ್ಲದೆ ಅತ್ಯಂತ ಆಕ್ರಮಣಕಾರಿ ಕ್ರಿಕೆಟಿಗ. ಚಾಲೆಂಜ್ ಅಂತ ಬಂದರೆ ಒಂದು ಹೆಜ್ಜೆ ಮುಂದಿದ್ದಾರೆ. ಇಂತಹ ಕ್ರಿಕೆಟಿಗ ಹತ್ತು ವರ್ಷಗಳ ಹಿಂದೆ ಕ್ಷಮೆ ಕೇಳಿದ್ದರು. ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ಬ್ಯಾನ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
2011ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸುಮ್ಮನಿರದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಮಧ್ಯದ ಬೆರಳನ್ನು ಮೇಲಕ್ಕೆತ್ತಿ ಅತಿರೇಕವಾಗಿ ವರ್ತಿಸಿದ್ರು. ಕೊಹ್ಲಿಯ ಈ ನಡೆಯನ್ನು ಅಂಪೈರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯ ಒಂದು ದಿನದ ನಂತರ ಮುಖ್ಯ ರೆಫರಿ ರಂಜನ್ ಮಧುಗಲ್ಲೆ ಅವರು ಕೊಹ್ಲಿಯನ್ನ ತಮ್ಮ ಕೋಣೆಗೆ ಕರೆದು ಘಟನೆಯ ವಿವರಗಳನ್ನು ಕೇಳಿದರು. ಈ ವೇಳೆ ಕೊಹ್ಲಿ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.
ದಯವಿಟ್ಟು ನನ್ನನ್ನು ಬ್ಯಾನ್ ಮಾಡಬೇಡಿ, ನಾನು ಈ ಘಟನೆಯನ್ನು ಮರೆತು ಮುಂದೆ ಹೋಗುತ್ತೇನೆ. ಇದರಿಂದಾಗಿ ಕೊಹ್ಲಿ ಬ್ಯಾನ್ ನಿಂದ ಪಾರಾಗಿದ್ದಾರೆ. ಕಿಂಗ್ ಕೊಹ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.