ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್‌ನ ಪವರ್‌ಹೌಸ್, ವಿರಾಟ್ ಕೊಹ್ಲಿ ಅವರು ಮೈದಾನದ ಹೊರಗಿನ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕ್ರಿಕೆಟ್ ಜಗತ್ತಿನ ದಿಗ್ಗಜರಿಗೂ ರಾಜಕೀಯದ ಪೆಡಂಭೂತ ಬಿಟ್ಟಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ. ಇತ್ತೀಚೆಗೆ ವಿರಾಟ್ ಕೊಹ್ಲಿ ಮಾಡಿದ ಒಂದು ನಿಗೂಢ ಟ್ವೀಟ್, ಅವರ ಕೋಟ್ಯಾಂತರ ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಸಂತಸವನ್ನು ಮೂಡಿಸಿದೆ. ಆದರೆ, ಆ ಟ್ವೀಟ್‌ನ ಒಳ ಅರ್ಥವೇನು ಎಂಬುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರೋ-ಕೊ ಜೋಡಿಗೆ ಕತ್ತರಿ? ಕೋಚ್ ಮತ್ತು ಆಯ್ಕೆ ಸಮಿತಿ ವಿರುದ್ಧ ಗುಸುಗುಸು
ಕಳೆದ ಏಳು ತಿಂಗಳಿನಿಂದ ಏಕದಿನ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ, ಮುಂಬರುವ ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಆದರೆ, ಅವರ ಅಭಿಮಾನಿಗಳಲ್ಲಿ ಒಂದು ಆತಂಕ ಮನೆ ಮಾಡಿದೆ – ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ ಅವರಿಗೆ ಇದೇ ಕೊನೆಯ ಸರಣಿಯಾಗಲಿದೆಯೇ?
ಹೌದು, ಟೀಮ್ ಇಂಡಿಯಾಕ್ಕೆ ಕೋಚ್ ಆಗಿ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ಬಂದ ನಂತರದಿಂದ, ಕ್ರಿಕೆಟ್ ವಲಯದಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿಯನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ, ವಿರಾಟ್ ಕೊಹ್ಲಿ ಅವರು ಸದ್ದಿಲ್ಲದೆ ಟೆಸ್ಟ್ ಮತ್ತು ಟಿ20 ಮಾದರಿಯಿಂದ ಹಿಂದೆ ಸರಿದಿದ್ದಾರೆ.
ನಿಗೂಢ ಟ್ವೀಟ್: “ಗೆಲುವಿಗಾಗಿ ಹೋರಾಟ ನಿಲ್ಲದು”
ಈ ಎಲ್ಲ ವಿವಾದಾತ್ಮಕ ಬೆಳವಣಿಗೆಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ನಿಗೂಢ ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಕೊಹ್ಲಿ, “The only time you truly fail, is when you decide to give up” (ನೀವು ನಿಜವಾಗಿಯೂ ವಿಫಲರಾಗುವುದು ನೀವು ಪ್ರಯತ್ನ ಬಿಟ್ಟಾಗ ಮಾತ್ರ) ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿಯವರ ಈ ಸ್ಪಷ್ಟ ಸಂದೇಶ ಅವರ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದೆ. ಇದನ್ನು ಓದಿದ ಬಹುತೇಕ ಅಭಿಮಾನಿಗಳು, ಕ್ರಿಕೆಟ್ ರಾಜಕೀಯಕ್ಕೆ ತಕ್ಕ ಉತ್ತರ ನೀಡಲು ಕೊಹ್ಲಿ ಸಿದ್ಧರಾಗಿದ್ದಾರೆ. ಅಲ್ಲದೆ, ಕೊಹ್ಲಿ ಅವರು ಖಂಡಿತವಾಗಿಯೂ 2027ರ ಏಕದಿನ ವಿಶ್ವಕಪ್ ಆಡಲಿದ್ದಾರೆ. ಅದನ್ನು ಗುರಿಯಾಗಿಸಿಕೊಂಡೇ ಈ ಪೋಸ್ಟ್ ಮಾಡಿದ್ದಾರೆ ಎಂದು ಅರ್ಥೈಸಿಕೊಂಡಿದ್ದಾರೆ.
ಇನ್ನು, ರೋ-ಕೊ ಜೋಡಿ ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ತಮ್ಮ ಆಟದ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಾರೆಯೇ ಅಥವಾ ಈ ಸರಣಿಯೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಶಕೆ ಶುರುವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.