ವಿರಾಟ್ ಕೊಹ್ಲಿ ಮುಡಿಗೆ 2023 ರ ವರ್ಷದ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿಯ ಗರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
2023 ರ ವರ್ಷದ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ (Pubity Athlete of the Year) ಗೆ ಕ್ರಿಕೆಟಿಗ ಕೊಹ್ಲಿ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರು ಎರಡನೇ ಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿಯನ್ನು (Lionel Messi) ಭಾರಿ ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದ್ದಾರೆ.

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ 2023 ರ ವರ್ಷದ ಪ್ಯೂಬಿಟಿ ಅಥ್ಲೀಟ್ ಎಂದು ಹೆಸರಿಸಲ್ಪಟ್ಟಿದ್ದಾರೆ. ಅಂತಿಮ ಮತ ಎಣಿಕೆಯಲ್ಲಿ ವಿರಾಟ್‌ ಕೊಹ್ಲಿ ಅವರು ಫುಟ್ಬಾಲ್‌ ಲೆಜೆಂಡ್‌ ಲಿಯೋನೆಲ್ ಮೆಸ್ಸಿ ಅವರನ್ನು 78-22 ರಿಂದ ಸೋಲಿಸಿದರು.

ಪ್ಯೂಬಿಟಿಯು ಆನ್‌ಲೈನ್ ಸಮುದಾಯವಾಗಿದ್ದು, 20 ಚಾನಲ್‌ಗಳನ್ನು ವ್ಯಾಪಿಸಿದೆ. ಈ ಜನಪ್ರಿಯ Instagram ಪುಟವು 35 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ ಮತ್ತು ಅಂಗಸಂಸ್ಥೆ ಚಾನಲ್ – ಪ್ಯೂಬಿಟಿ ಸ್ಪೋರ್ಟ್ – ಕ್ರೀಡೆಯ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಲಿಯೋನೆಲ್ ಮೆಸ್ಸಿ ನಡುವೆ ಆನ್‌ಲೈನ್ ಸಮೀಕ್ಷೆಯನ್ನು ಆಯೋಜಿಸಿದೆ.

ನೊವಾಕ್ ಜೊಕೊವಿಕ್, ಪ್ಯಾಟ್ ಕಮ್ಮಿನ್ಸ್, ಲೆಬ್ರಾನ್ ಜೇಮ್ಸ್, ಎರ್ಲಿಂಗ್ ಹಾಲೆಂಡ್, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಮ್ಯಾಕ್ಸ್ ವರ್ಸ್ಟಾಪ್ಪೆನ್ ಸೇರಿದಂತೆ ಹದಿನಾರು ಅಥ್ಲೀಟ್‌ಗಳು ಆನ್‌ಲೈನ್ ಮತದಾನಕ್ಕಾಗಿ ನಾಕೌಟ್ ಸೆಟಪ್‌ನಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸಿದರು.

ಇದರ ಫೈನಲ್‌ನಲ್ಲಿ ಹಣಾಹಣಿ ಕೊಹ್ಲಿ ಮತ್ತು ಮೆಸ್ಸಿ ನಡುವೆ ಬಂದಿತು. ಅಂತಿಮವಾಹಿ ಭಾರತದ ಕ್ರಿಕೆಟರ್‌ 78% ಮತಗಳನ್ನು ಪಡೆದು ವರ್ಷದ ಪ್ಯೂಬಿಟಿ ಅಥ್ಲೀಟ್ 2023 ಪ್ರಶಸ್ತಿಯನ್ನು ಗೆದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!