ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಫ್ಯಾನ್ಸ್ ನಡುವಣ ಕಿರಿಕ್ನೊಂದಿಗೆ ಕೊನೆಗೊಂಡಿರುವುದು ವಿಶೇಷ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ಗೆಲುವನ್ನು ಖಚಿತಪಡಿಸಿಕೊಂಡಿದ್ದರು. ಹೀಗಾಗಿಯೇ ಟೀಮ್ ಇಂಡಿಯಾವನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದ್ದರು. ಅದರಲ್ಲೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಆಸ್ಟ್ರೇಲಿಯನ್ನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಇತ್ತ ವಿಕೆಟ್ ಕಬಳಿಸಲು ಟೀಮ್ ಇಂಡಿಯಾ ಬೌಲರ್ಗಳು ಪರದಾಡುತ್ತಿದ್ದರು. ಈ ವೇಳೆ ಮೂದಲಿಕೆಯ ಮೂಲಕ ಆಸ್ಟ್ರೇಲಿಯಾ ಅಭಿಮಾನಿಗಳು ಭಾರತೀಯ ಬೌಲರ್ಗಳನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದ್ದರು. ಇದರಿಂದ ವಿರಾಟ್ ಕೊಹ್ಲಿ ಸಿಟ್ಟುಗೊಂಡಿದ್ದರು.
ಇದರ ನಡುವೆ ಸ್ಟೀವ್ ಸ್ಮಿತ್ ವಿಕೆಟ್ ಸಿಗುತ್ತಿದ್ದಂತೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಮಾಡಿದಂತ ಸನ್ನೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಇತಿಹಾಸ ನೆನಪಿಸಿ ಆಸಿಸ್ ಮಾನ ಕಳೆಯುತ್ತಿವೆ.
ಬೂಮ್ರಾ ಅವರು 5ನೇ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೆ ಒಳಗಾದಾಗ ತಮ್ಮ ಶೂನಲ್ಲಿದ್ದ ಸ್ಯಾಂಡ್ ಪೇಪರ್ ಅನ್ನು ಹೊರ ತೆಗೆದಿದ್ದರು. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಈ ಒಂದು ಕಾರಣದಿಂದ ಅಲ್ಲಿನ ಆಸ್ಟ್ರೇಲಿಯನ್ ಫ್ಯಾನ್ಸ್, ಶೂನಲ್ಲಿ ಸ್ಯಾಂಡ್ಪೇಪರ್ ಇಟ್ಟು ಟೆಸ್ಟ್ ಗೆಲ್ಲಲು ಭಾರತ ಪ್ರಯತ್ನಿಸಿದೆ ಎಂದು ವದಂತಿ ಮಾಡಿದ್ದರು. ಅಲ್ಲದೇ ಟೆಸ್ಟ್ನ 3ನೇ ದಿನ ಗ್ರೌಂಡ್ನಲ್ಲಿ ವಿರಾಟ್ ಕೊಹ್ಲಿಗೆ ಅಣಕಿಸುತ್ತಿದ್ದರು.
ಆದರೆ ಅಣಕಿಸಲು ಬಂದ ಆಸ್ಟ್ರೇಲಿಯನ್ ಫ್ಯಾನ್ಸ್ಗೆ, ವಿರಾಟ್ ಕೊಹ್ಲಿ ಸರಿಯಾದ ಉತ್ತರ ಕೊಟ್ಟಿದ್ದಾರೆ. ಸ್ಯಾಂಡ್ಪೇಪರ್ ಹಗರಣದ ಇತಿಹಾಸ ನೆನಪಿಸಿದ್ದಾರೆ.
2018ರಲ್ಲಿ ನಿಮ್ಮಂತೆ ಪಂದ್ಯ ಗೆಲ್ಲಲು ಪ್ರಯತ್ನಿಸಿಲ್ಲ ಎಂದು ಮೈದಾನದಲ್ಲೇ ಕೊಹ್ಲಿ, ಆಸಿಸ್ ಅಭಿಮಾನಿಗಳಿಗೆ ಅಣಕಿಸಿದ್ದಾರೆ. ನನ್ನ ಎರಡು ಜೇಬುಗಳು ಖಾಲಿ ಇದೆ, ಪ್ಯಾಂಟ್ ಒಳಗೆ ಏನು ಇಲ್ಲ, ಕೈಯಲ್ಲೂ ಏನೂ ಇಲ್ಲ ನೋಡಿ ಎಂದು ತೋರಿಸಿ ಅವರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಕೊಹ್ಲಿ ಈ ರೀತಿ ಸನ್ನೆಗಳನ್ನು ಮಾಡಿ ತೋರಿಸುವಾಗ ಇಡೀ ಸ್ಟೇಡಿಯಂನಲ್ಲಿದ್ದ ಜನರು ಫುಲ್ ಕಿರುಚಾಟ, ಕೂಗುವುದು ಮಾಡುತ್ತಿದ್ದರು. ಆದರೆ ವಿರಾಟ್ ತಾನು ಕೊಡಬೇಕಾದ ಆನ್ಸರ್ ಅನ್ನು ಆಸ್ಟ್ರೇಲಿಯನ್ರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದ್ದಾರೆ.
2018 ರಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಈ ಮೂಲಕ ಸೌತ್ ಆಫ್ರಿಕಾ ಬ್ಯಾಟರ್ಗಳನ್ನು ಔಟ್ ಮಾಡಲು ಪ್ಲ್ಯಾನ್ ರೂಪಿಸಿದ್ದರು. ಈ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್‌ರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧಿಸಿತು.