April 13, 2026
Monday, April 13, 2026
spot_img

ದಾಖಲೆಗಳ ‘ವಿರಾಟ’ ರೂಪ: ಯುನಿವರ್ಸ್ ಬಾಸ್‌ ದಾಖಲೆ ಧೂಳಿಪಟ ಮಾಡಿದ ರನ್ ಮಷೀನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಲೋಕದ ದಾಖಲೆಗಳ ಸರದಾರ, ಕಿಂಗ್ ವಿರಾಟ್ ಕೊಹ್ಲಿ ಮುಕುಟಕ್ಕೆ ಮತ್ತೊಂದು ಹೊಚ್ಚ ಹೊಸ ವಿಶ್ವ ದಾಖಲೆಯ ಗರಿ ಸೇರ್ಪಡೆಯಾಗಿದೆ. ಟಿ20 ಕ್ರಿಕೆಟ್‌ನ ದೈತ್ಯ ಬ್ಯಾಟರ್, ‘ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಅವರ ಸುದೀರ್ಘ ಕಾಲದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಕೊಹ್ಲಿ ಈಗ ವಿಶ್ವದ ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಭರ್ಜರಿ ಜೊತೆಯಾಟವಾಡುವ ಮೂಲಕ ಈ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಯಿತು.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ ವಿವಿಧ ಲೀಗ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಒಟ್ಟು 455 ಇನಿಂಗ್ಸ್‌ಗಳಲ್ಲಿ 46 ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ, ವಿರಾಟ್ ಕೊಹ್ಲಿ ಕೇವಲ 400 ಇನಿಂಗ್ಸ್‌ಗಳಲ್ಲಿ 47ನೇ ಬಾರಿ ನೂರಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡುವ ಮೂಲಕ ಗೇಲ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.

ಆಟಗಾರಇನಿಂಗ್ಸ್ಶತಕದ ಜೊತೆಯಾಟಗಳು
ವಿರಾಟ್ ಕೊಹ್ಲಿ40047
ಕ್ರಿಸ್ ಗೇಲ್45546

ಕೇವಲ ಟೀಮ್ ಇಂಡಿಯಾ ಮತ್ತು ಆರ್‌.ಸಿ.ಬಿ ತಂಡಗಳ ಪರವಾಗಿಯೇ ಆಡಿ ಇಂತಹ ಬೃಹತ್ ದಾಖಲೆ ಬರೆದಿರುವುದು ಕೊಹ್ಲಿ ಅವರ ಸ್ಥಿರತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ‘ಜೊತೆಯಾಟದ ಸಾಮ್ರಾಟ’ನಾಗಿ ವಿರಾಟ್ ಹೊರಹೊಮ್ಮಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !