April 4, 2026
Saturday, April 4, 2026
spot_img

ಸಪ್ತಪದಿ ತುಳಿಯಲು ಸಜ್ಜಾದ ‘VIROSH’ ಜೋಡಿ: ಉದಯಪುರದಲ್ಲಿ ವಿವಾಹ, ಕೊಡಗಿನಲ್ಲಿ ಹಬ್ಬ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಕಾಲದ ಗುಸುಗುಸು ಸುದ್ದಿಗೆ ತೆರೆಬಿದ್ದಿದ್ದು, ದಕ್ಷಿಣ ಭಾರತದ ಖ್ಯಾತ ನಟಿ, ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಅವರ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ರಶ್ಮಿಕಾ ಅವರ ಮನೆ ಈಗ ಮದುವೆಯ ಸಂಭ್ರಮದಿಂದ ಕಂಗೊಳಿಸುತ್ತಿದೆ.

Rashmika Mandanna Vijay Devarakonda Wedding Decorated Kodagu Virajpet House 1

ರಶ್ಮಿಕಾ ಅವರ ಪೋಷಕರು ಮತ್ತು ಆಪ್ತರು ಈಗಾಗಲೇ ಮದುವೆ ಸಮಾರಂಭಕ್ಕಾಗಿ ರಾಜಸ್ಥಾನದ ಉದಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮದುವೆ ವಿದೇಶಿ ಅಥವಾ ಅದ್ದೂರಿ ತಾಣದಲ್ಲಿ ನಡೆಯುತ್ತಿದ್ದರೂ, ಕೊಡಗಿನ ಮೂಲ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಚಪ್ಪರ ಹಾಕಿ, ಹೂವುಗಳಿಂದ ಅಲಂಕರಿಸುವ ಮೂಲಕ ಸಂಪ್ರದಾಯವನ್ನು ಪಾಲಿಸಲಾಗಿದೆ.

ಮದುವೆ ರಾಜಸ್ಥಾನದಲ್ಲಿ ನಡೆದರೂ, ಕೊಡಗಿನ ಬಂಧು-ಮಿತ್ರರಿಗಾಗಿ ಮತ್ತು ಅಭಿಮಾನಿಗಳಿಗಾಗಿ ಏಪ್ರಿಲ್ ತಿಂಗಳಲ್ಲಿ ವಿಶೇಷ ಔತಣಕೂಟವನ್ನು ಹಮ್ಮಿಕೊಳ್ಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಗಳು ಮತ್ತು ಅಳಿಯನನ್ನು ಸ್ವಾಗತಿಸಲು ಇಡೀ ಕೊಡಗು ಕಾತುರದಿಂದ ಕಾಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !