SHOCKING| ವೈಸಿಪಿ ಸಂಸದನ ಪತ್ನಿ ಹಾಗೂ ಪುತ್ರನ ಕಿಡ್ನಾಪ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣಂನಲ್ಲಿ ಅಪಹರಣದ ಘಟನೆ ಸಂಚಲನ ಮೂಡಿಸಿದೆ. ಪ್ರಮುಖ ಲೆಕ್ಕ ಪರಿಶೋಧಕ ಮಾಜಿ ಸ್ಮಾರ್ಟ್ ಸಿಟಿ ಅಧ್ಯಕ್ಷ ಗೋಪಾಲಪುರಂ ಉಸ್ತುವಾರಿ ಜಿವಿ ಅವರ ಅಪಹರಣದ ಜೊತೆಗೆ, ವಿಶಾಖ ಸಂಸದ ಎವಿವಿ ಸತ್ಯನಾರಾಯಣ ಅವರ ಪುತ್ರ ಮತ್ತು ಪತ್ನಿ ಕೂಡ ಇದ್ದಾರೆ ಎಂದು ವರದಿಯಾಗಿದೆ. ಈ ಅಪಹರಣ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ವಿಶಾಖ ಪೊಲೀಸರು ಫೀಲ್ಡಿಗಿಳಿದಿದ್ದಾರೆ.

ಸಂಸದ ಎಂವಿವಿ ಸತ್ಯನಾರಾಯಣ, ಅವರ ಪತ್ನಿ ಜ್ಯೋತಿ, ಪುತ್ರ ಶರತ್ ಹಾಗೂ ಲೆಕ್ಕ ಪರಿಶೋಧಕ ಜಿಇಇ ಕಿಡ್ನಾಪ್ ಆಗಿರುವ ಸುದ್ದಿ ಸಂಚಲನ ಮೂಡಿಸುತ್ತಿದೆ. ಗುರುವಾರ (ಜೂನ್ 15, 2023) ಬೆಳಿಗ್ಗೆ, ಋಷಿಕೊಂಡದಲ್ಲಿರುವ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಕಿಡ್ನಾಪ್‌ ಮಾಡಿದ್ದಾರೆ. ಅಪಹರಣದ ವೇಳೆ ಸಂಸದ ಎಂವಿವಿ ಸತ್ಯನಾರಾಯಣ ಅವರು ಮನೆಯಲ್ಲಿ ಇರಲಿಲ್ಲವಂತೆ.

ಸಂಸದರು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ವಿವಾದದಿಂದ ಈ ಅಪಹರಣ ನಡೆದಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶಾಖದಲ್ಲಿ ಸಂಚಲನ ಮೂಡಿಸುತ್ತಿರುವ ಈ ಅಪಹರಣಗಳ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!