ಮದುವೆ ಕುರಿತು ಮತ್ತೆ ಸುದ್ದಿಯಲ್ಲಿ ವಿಶಾಲ್: ಕೊನೆಗೂ ಹೇಳಿದ್ದೇನು ತಮಿಳು ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ವಿಶಾಲ್ ತಮ್ಮ ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳ ಮೆಚ್ಚುಗೆಪಡೆದಿದ್ದು, ಇದೀಗ ಬಹುನಿರೀಕ್ಷಿತ `ಲಾಠಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ವಿಶಾಲ್ ಮದುವೆ ವಿಷ್ಯಕ್ಕೆ ರಿಯಾಕ್ಟ್ ಮಾಡಿದ್ದಾರೆ. ತಮ್ಮ ಮದುವೆ ಯಾವಾಗ ಎಂಬುದನ್ನ ರಿವೀಲ್ ಮಾಡಿದ್ದಾರೆ.

ವಿಶಾಲ್ ಕೇಳ್ವ ನಟನೆ ಮೂಲಕ ಮನೆಮಾತಾಗಿಲ್ಲ. ಬದಲಿಗೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಜೊತೆ ಪುನೀತ್ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅಪ್ಪು ಅಗಲಿಕೆಯ ನಂತರ ಶಕ್ತಿಧಾಮದ ಮಕ್ಕಳ ಜವಬ್ದಾರಿಯನ್ನು ತಾವೇ ಹೊತ್ತುಕೊಳ್ಳುವುದಾಗಿ ಹೇಳಿದ್ದರು.

ಇದೀಗ ವಿಶಾಲ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಲಾಠಿ’ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಪ್ರಚಾರದಲ್ಲಿರುವ ವಿಶಾಲ್, ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಪ್ರತಿ ವಿಚಾರಕ್ಕೂ ಒಂದು ಸಮಯ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣದ ಬಳಿಕ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ ಎಂದು ವಿಶಾಲ್ ಮಾತನಾಡಿದ್ದಾರೆ.

ವಿಶಾಲ್‌ಗೆ 45 ವರ್ಷ ವಯಸ್ಸಾಗಿದೆ. ಈ ಹಿಂದೆ ಹೈದರಾಬಾದ್‌ನ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಬಳಿಕ ವೈಯಕ್ತಿಕ ಕಕಾರಣಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಮತ್ತೆ ವಿಶಾಲ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!