ಗೋಹಿಂಸೆಯ ವಿರುದ್ಧ ವಿಷ್ಣು ಸಹಸ್ರನಾಮ ಪಠಣ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಭಿಯಾನಕ್ಕೆ ಚಾಲನೆ

ಹೊಸದಿಗಂತ ವರದಿ,ಮಂಗಳೂರು:

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ನಿರಂತರ ಕ್ರೌರ್ಯಗಳ ಹಿನ್ನೆಲೆಯಲ್ಲಿ ಗೋಸಂತತಿ ರಕ್ಷಣೆಗಾಗಿ ಭಗವಂತನಿಗೆ ಮೊರೆ ಹೋಗಲು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ ಕರೆಯಂತೆ ಒಂದು ವಾರ ಕಾಲ ಶ್ರೀ ವಿಷ್ಣುಸಹಸ್ರನಾಮ ಪಾರಾಯಣಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಚಾಲನೆ ನೀಡಿದರು.

ಗೋವುಗಳ ಮೇಲೆ ಬಿಭತ್ಸ ಹಿಂಸೆ,ವಧೆ, ಆಕ್ರಮಣಗಳು ಸನಾತನ ಧರ್ಮೀಯ ಶ್ರದ್ಧಾವಂತರನ್ನು ತೀವ್ರ ಸಂಕಟಕ್ಕೆ ಈಡು ಮಾಡಿದ್ದು ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಭಗವಂತನಿಗೆ ಶರಣಾಗಬೇಕು ಎಂದು ಕರೆ ಕೊಟ್ಟಿರುವ ಪೇಜಾವರ ಶ್ರೀಗಳ ಅಭಿಮತದಂತೆ ಪರ್ಯಾಯ ಶ್ರೀ ಪುತ್ತಿಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಒಂದು ವಾರ ಕಾಲ ವಿಶೇಷ ವಿಷ್ಣು ಸಹಸ್ರನಾಮ ಪಾರಾಯ, ಶಿವಪಂಚಾಕ್ಷರಿ ಜಪ, ಮತ್ತು ತತ್ಸಂಬಂಧಿ ಹೋಮಗಳು, ಮಾತೆಯರಿಂದ ಗೀತಾ ಪಾರಾಯಣ ನಡೆಯಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here